ಚಿತ್ರಲೋಕದ ಸೋರ್ಸ್ ಪಕ್ಕಾ ಇತ್ತು. ಸುದ್ದಿ ಸುಳ್ಳಾಗಲಿಲ್ಲ. ಏಪ್ರಿಲ್ 10ರಂದು ಚಿತ್ರದ ರಿಲೀಸ್ ಯಾವಾಗ ಎಂದು ತಿಳಿಸುತ್ತೇವೆ ಎಂದು ಪರಂವಾ ಸ್ಟುಡಿಯೋಸ್ ಅನೌನ್ಸ್ ಮಾಡಿದ ದಿನವೇ, ಜೂನ್ 10ಕ್ಕೆ ರಿಲೀಸ್ ಎಂದು ಘೋಷಿಸಿತ್ತು ಚಿತ್ರಲೋಕ. ಹಾಗೆಯೇ ಈಗ 777 ಚಾರ್ಲಿ, ಜೂನ್ 10ಕ್ಕೆ ಬರುವುದು ಅಧಿಕೃತವಾಗಿದೆ.
ಕನ್ನಡದ ಜೊತೆ ಹಿಂದಿ, ತೆಲುಗು, ತಮಿಳು, ಮಲಯಾಳಂ ಸೇರಿ ಒಟ್ಟು 5 ಭಾಷೆಗಳಲ್ಲಿ ರಿಲೀಸ್ ಆಗಲಿರುವ ಪ್ಯಾನ್ ಇಂಡಿಯಾ ಸಿನಿಮಾ 777 ಚಾರ್ಲಿ. ರಕ್ಷಿತ್ ಶೆಟ್ಟಿ ಜೊತೆ ನಾಯಿಯೊಂದು ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದೆ. ಚಾರ್ಲಿ ಅನ್ನೋದು ಅದೇ ನಾಯಿಯ ಹೆಸರು. ಕಿರಣ್ ರಾಜ್ ನಿರ್ದೇಶನದ ಚಿತ್ರದಲ್ಲಿ ಸಂಗೀತಾ ಶೃಂಗೇರಿ, ರಾಜ್ ಬಿ.ಶೆಟ್ಟಿ, ದಾನಿಷ್ ಸೇಠ್ ಕೂಡಾ ನಟಿಸಿದ್ದಾರೆ.