ಕೆಜಿಎಫ್ ಚಾಪ್ಟರ್ 2 ಬಿಡುಗಡೆ ಮುನ್ನ ಯಶ್ ಮತ್ತು ವಿಜಯ್ ಕಿರಗಂದೂರು ದೇಗುಲ ದರ್ಶನ ಮಾಡುತ್ತಿದ್ದಾರೆ. ಧರ್ಮಸ್ಥಳ ಮಂಜುನಾಥ ಸ್ವಾಮಿ, ಕುಕ್ಕೆ ಸುಬ್ರಹ್ಮಣ್ಯ ದೇಗುಲ ಮತ್ತು ಉಜಿರೆಯ ಸೂರ್ಯ ಮಂದಿರಕ್ಕೆ ಭೇಟಿ ನೀಡಿದ್ದಾರೆ.
ಧರ್ಮಸ್ಥಳದಲ್ಲಿ ಪೂಜೆ ಮುಗಿಸಿದ ಯಶ್ ಮತ್ತು ವಿಜಯ್ ಕಿರಗಂದೂರು ಧರ್ಮಾಧಿಕಾರಿ ವೀರೇಂದ್ರ ಹೆಗ್ಗಡೆ ಅವರೊಂದಿಗೆ ಮಾತುಕತೆ ನಡೆಸಿದರು. ಚಿತ್ರದ ಬಗ್ಗೆ ಮಾಹಿತಿ ಪಡೆದುಕೊಂಡ ಹೆಗ್ಗಡೆಯವರು ಕುಟುಂಬದವರು, ಮಕ್ಕಳ ಬಗ್ಗೆಯೂ ತಿಳಿದುಕೊಂಡರು.
ಇಷ್ಟು ಶ್ರಮ ಪಟ್ಟಿದ್ದೇವೆ. ಅದರ ಜೊತೆ ದೇವರ ಅನುಗ್ರಹವೂ ಬೇಕು. ಹೀಗಾಗಿ ಬಂದಿದ್ದೇವೆ. ಚಿತ್ರದ ಟಿಕೆಟ್ ಓಪನ್ ಆಗಿದೆ ಎಂದರು ಯಶ್.
ಬುಕ್ಕಿಂಗ್ ಓಪನ್ ಆಗಿದ್ದು, ಬೆಂಗಳೂರಿನಲ್ಲಿ ಗರಿಷ್ಠ ಬೆಲೆ 2000 ರೂ. ಇದೆ. ಒಂದು ಲೆಕ್ಕದ ಪ್ರಕಾರ ಪ್ರಶಾಂತ್ ನೀಲ್ ನಿರ್ದೇಶನದ ಕೆಜೆಎಫ್ ಚಾಪ್ಟರ್ 2, ಆರ್.ಆರ್.ಆರ್. ಗಳಿಸಿದ್ದ ಮೊದಲ ದಿನದ ದಾಖಲೆಯನ್ನು ಮುರಿಯುವ ನಿರೀಕ್ಷೆ ಇದೆ.