ಕೆಜಿಎಫ್ ಚಾಪ್ಟರ್ 2 ದಾಖಲೆ ಬರೆಯಲೆಂದೇ ನಿರ್ಮಾಣವಾದ ಇಂಡಿಯನ್ ಸಿನಿಮಾ. ರಾಕಿಂಗ್ ಸ್ಟಾರ್ ಯಶ್, ಶ್ರೀನಿಧಿ ಶೆಟ್ಟಿ, ಸಂಜಯ್ ದತ್, ರವೀನಾ ಟಂಡನ್, ಮಾಳವಿಕಾ ಅವಿನಾಶ್, ಪ್ರಕಾಶ್ ರೈ, ನಾಗಾಭರಣ, ವಸಿಷ್ಠ ಸಿಂಹ ಮೊದಲಾದವರು ನಟಿಸಿರೋ ಚಿತ್ರ ಏಪ್ರಿಲ್ 14ರಂದು ರಿಲೀಸ್ ಆಗುತ್ತಿದೆ. ಆ ದಿನ ಕೆಜಿಎಫ್ ಹಬ್ಬವೇ ನಡೆಯುತ್ತಿದೆ. ರಿಲೀಸ್ ಆಗುತ್ತಿರೋದು 10 ಸಾವಿರಕ್ಕೂ ಹೆಚ್ಚು ಥಿಯೇಟರುಗಳಲ್ಲಿ.
ಅಮೆರಿಕ, ಬ್ರಿಟನ್, ದುಬೈ, ಯುಎಇ, ಸೌದಿ ಅರೇಬಿಯಾ, ರಷ್ಯಾ, ಗ್ರೀಸ್, ಫ್ರಾನ್ಸ್, ಆಸ್ಟ್ರೇಲಿಯಾ, ಮಲೇಷಿಯಾ ಸೇರಿದಂತೆ ಜಗತ್ತಿನ ಸುಮಾರು 50 ರಾಷ್ಟ್ರಗಳಲ್ಲಿ ರಿಲೀಸ್ ಆಗುತ್ತಿರೋ ಚಿತ್ರದ ಮೊದಲ ದಿನದ ಬಾಕ್ಸಾಫೀಸ್ ಗಳಿಕೆ ಎಷ್ಟಿರಬಹುದು ಎಂಬ ಲೆಕ್ಕಾಚಾರ ಶುರುವಾಗಿದೆ. ಮೊದಲ ದಿನವೇ 100 ಕೋಟಿ ಕಲೆಕ್ಷನ್ ದಾಟಬಹುದು ಎಂಬುದು ಎಲ್ಲರ ನಿರೀಕ್ಷೆ.
ಪ್ರಶಾಂತ್ ನೀಲ್ ಮ್ಯಾಜಿಕ್ ಮತ್ತೊಮ್ಮೆ ಕೆಲಸ ಮಾಡಿದ್ದು, ಇದರಿಂದ ಖುಷಿಯಾಗಲಿರೋದು ಹೊಂಬಾಳೆ ಫಿಲಮ್ಸ್‍ನ ಬ್ರಹ್ಮ ವಿಜಯ್ ಕಿರಗಂದೂರು. ಕನ್ನಡ ಚಿತ್ರವೊಂದು ಈ ಪರಿ ಸದ್ದು ಮಾಡುತ್ತಿರೋದು ಎಲ್ಲರಿಗೂ ಖುಷಿ ಕೊಟ್ಟಿದೆ. ಕರ್ನಾಟಕದಲ್ಲಿ ಕನ್ನಡ ವರ್ಷನ್ ಕೆಜಿಎಫ್ ಮೊದಲ ವಾರದಲ್ಲಿಯೇ 100 ಕೋಟಿ ದಾಟಬಹುದು ಎಂಬ ನಿರೀಕ್ಷೆಯೂ ಇದೆ. ಒಟ್ಟಿನಲ್ಲಿ ಕೆಜಿಎಫ್ ಬಂದಿರೋದೇ ದಾಖಲೆ ಬರೆಯೋಕೆ ಎಂಬ ವಾತಾವರಣ ಎಲ್ಲೆಡೆ ಇದೆ. ಅಂದಹಾಗೆ ಬುಕ್ಕಿಂಗ್ ಇವತ್ತಿಂದ ಆರಂಭ.