` ಕೆಜಿಎಫ್ ಸೃಷ್ಟಿಸಿದ ದಾಖಲೆಗಳು ಮತ್ತು ಒಂದಿಷ್ಟು ಸೀಕ್ರೆಟ್ಟುಗಳು.. - chitraloka.com | Kannada Movie News, Reviews | Image

User Rating: 0 / 5

Star inactiveStar inactiveStar inactiveStar inactiveStar inactive
 
ಕೆಜಿಎಫ್ ಸೃಷ್ಟಿಸಿದ ದಾಖಲೆಗಳು ಮತ್ತು ಒಂದಿಷ್ಟು ಸೀಕ್ರೆಟ್ಟುಗಳು..
KGF Chapter 2 Image

ಕೆಜಿಎಫ್ ಚಾಪ್ಟರ್ ಬರ್ತಿರೋದೇ ದಾಖಲೆ ಮಾಡೋಕೆ ಅನ್ನೋ ಹಾಗೆ ಮುನ್ನುಗ್ತಾನೇ ಇದೆ. ರಾಕಿಂಗ್ ಸ್ಟಾರ್ ಯಶ್, ಶ್ರೀನಿಧಿ ಶೆಟ್ಟಿ, ಸಂಜಯ್ ದತ್, ರವೀನಾ ಟಂಡನ್, ಪ್ರಕಾಶ್ ರೈ, ಮಾಳವಿಕಾ ಅವಿನಾಶ್, ನಾಗಾಭರಣ, ವಸಿಷ್ಠ ಸಿಂಹ ನಟಿಸಿರೋ ಚಿತ್ರವಿದು. ಪ್ರಶಾಂತ್ ನೀಲ್ ನಿರ್ದೇಶನದ ಸಿನಿಮಾ ಆಗಿರೋ ಕಾರಣ ನಿರೀಕ್ಷೆಯೂ ಭಯಂಕರ. ವಿಜಯ್ ಕಿರಗಂದೂರು ನಿರ್ಮಾಣದ ಚಿತ್ರ ಎಂದ ಮೇಲೆ ಭರ್ಜರಿ ಪ್ರಚಾರವೂ ಸಹಜ. ಹೀಗಾಗಿಯೇ ದಾಖಲೆಗಳ ಮೇಲೆ ದಾಖಲೆ ಬರೆಯುತ್ತಿದೆ ಕೆಜಿಎಫ್ ಚಾಪ್ಟರ್ 2.

ರಿಲೀಸ್ ಆಗುವ ಮೊದಲೇ ವಿದೇಶದಲ್ಲಿ ಅತೀ ಹೆಚ್ಚು ಬುಕ್ಕಿಂಗ್ ಆದ ಸಿನಿಮಾ ಎಂಬ ದಾಖಲೆ ಬರೆದಿರೋದು ಕೆಜಿಎಫ್. ಅಮೆರಿಕವೊಂದರಲ್ಲೇ ವಾರಕ್ಕೂ ಮೊದಲೇ 2 ಕೋಟಿ ಬಿಸಿನೆಸ್ ಆಗಿದೆ.

ವರ್ಸ್ ಮೂಲಕ ಚಿತ್ರದ ಪ್ರಚಾರ ಮಾಡುತ್ತಿರೋ ಮೊದಲ ಸಿನಿಮಾ ಕೆಜಿಎಫ್ ಚಾಪ್ಟರ್ 2. ಹೊಂಬಾಳೆಯವರು ವರ್ಸ್‍ಗಳನ್ನು ರಿಲೀಸ್ ಮಾಡಿದ್ದು, 10 ಸಾವಿರ ಟೋಕನ್ ಬಿಟ್ಟಿದ್ದಾರೆ. ದಾಖಲೆ ವೇಗದಲ್ಲಿ ಎಲ್ಲ ವರ್ಸ್‍ಗಳ ಟೋಕನ್‍ಗಳೂ ಸೇಲ್ ಆಗಿಬಿಟ್ಟಿವೆ.

ಗಗನ ನೀ.. ಭುವನ ನೀ.. ಶಿಖರ ನೀ.. ಹಾಡು 35 ಲಕ್ಷಕ್ಕೂ ಹೆಚ್ಚು ವೀಕ್ಷಣೆ ಪಡೆದಿದೆ. ಇದೂ ದಾಖಲೆಯೇ.

ಇನ್ನು ಯಶ್ & ಟೀಂ ಹೋದಲ್ಲಿ ಬಂದಲ್ಲಿ ಸೇರುತ್ತಿರೋ ಅಭಿಮಾನಿಗಳ ಸೈನ್ಯವನ್ನು ನೋಡೋದೇ ಚೆಂದ.

ಇದರ ಜೊತೆಗೆ ಒಂದು ಸೀಕ್ರೆಟ್ ಏನಂದ್ರೆ ಧೀರ ಧೀರ ಧೀರ ಈ ಸುಲ್ತಾನಾ ಟ್ರ್ಯಾಕ್ ಕೆಜಿಎಫ್ ಚಾಪ್ಟರ್ 2 ಉದ್ದಕ್ಕೂ ಇರಲಿದೆ. ಥೀಮ್ ಸಾಂಗ್ ಹಾಗೂ ಮ್ಯೂಸಿಕ್ ಆಗಿ ಚಿತ್ರದುದ್ದಕ್ಕೂ ಪ್ರಶಾಂತ್ ನೀಲ್ ಬಳಸಿಕೊಂಡಿದ್ದಾರೆ.