ಹೆಂಗೆ ನಾವು ಖ್ಯಾತಿಯ ರಚನಾ ಇಂದರ್.. ಹೊಸ ಪ್ರತಿಭೆ ಪ್ರವೀಣ್ ಪ್ರಧಾನ ಪಾತ್ರದಲ್ಲಿರೋ ಸಿನಿಮಾ ಲವ್ 360. ಶಶಾಂಕ್ ನಿರ್ದೇಶನವಾಗಿರೋ ಕಾರಣ ನಿರೀಕ್ಷೆಯೂ ದೊಡ್ಡದು. ಒಂದೊಳ್ಳೆ ಕಥೆ ಖಂಡಿತಾ ಇರುತ್ತದೆ ಎನ್ನುವ ನಂಬಿಕೆ. ಆ ನಂಬಿಕೆಗೆ ತಕ್ಕಂತೆಯೇ ಬಂದಿದೆ ಲವ್ 360 ಚಿತ್ರದ ಇನ್ನೊಂದು ಹಾಡು.. ಸಖಿಯೇ ಸಾವರಿಸು..
ಶಶಾಂಕ್ ಅವರೇ ಸಾಹಿತ್ಯ ಬರೆದಿದ್ದು, ಪ್ರೇಮಿಗಳು ಪರಸ್ಪರ ಸಂತೈಸಿಕೊಳ್ಳೋ ರೀತಿ ಸಾಹಿತ್ಯವಿದೆ. ಅರ್ಜುನ್ ಜನ್ಯ ಸಂಗೀತದಲ್ಲಿ ಹಾಡಿಗೆ ಇನ್ನಷ್ಟು ಶಕ್ತಿ ಕೊಟ್ಟಿದ್ದಾರೆ ಗಾಯಕ ಸಂಜಿತ್ ಹೆಗ್ಡೆ. ಶಶಾಂಕ್ ಸಿನಿಮಾಸ್‍ನಲ್ಲಿಯೇ ಸಿದ್ಧವಾಗುತ್ತಿರೋ ಸಿನಿಮಾ ಬಹುತೇಕ ರೆಡಿಯಾಗಿದೆ. ಡಾ.ಮಂಜುಳಾ ಮೂರ್ತಿ ಮತ್ತು ಶಶಾಂಕ್ ನಿರ್ಮಾಣದಲ್ಲಿ ಬರುತ್ತಿರೋ ಸಿನಿಮಾ ಇದು ಲವ್ 360.