ಕೆಜಿಎಫ್ ಚಾಪ್ಟರ್ 2. ರಿಲೀಸ್ ಆಗೋಕೆ ರೆಡಿಯಾಗಿದೆ. ದೇಶಾದ್ಯಂತ ಈಗ ಕೆಜಿಎಫ್ ತೂಫಾನ್. ರಾಕಿಂಗ್ ಸ್ಟಾರ್ ಯಶ್, ಪ್ರಶಾಂತ್ ನೀಲ್ ಶ್ರೀನಿಧಿ ಶೆಟ್ಟಿ, ಸಂಜಯ್ ದತ್, ರವೀನಾ ಟಂಡನ್, ಪ್ರಕಾಶ್ ರೈ, ಮಾಳವಿಕಾ ಅವಿನಾಶ್.. ಎಲ್ಲರೂ ಈಗ ಟಾಕ್ ಆಫ್ ದಿ ಕಂಟ್ರಿ. ಈ ಕನ್ನಡದ ಸಿನಿಮಾ ಕ್ರೇಜ್ ಹೇಗಿದೆ ಅನ್ನೋದನ್ನು ನಾವೆಲ್ಲ ನೋಡಿದ್ದೇವೆ. ಆದರೆ, ಈ ಕ್ರೇಜ್ ಕನ್ನಡಕ್ಕಿಂತ ಬೇರೆ ಭಾಷೆಯಲ್ಲೇ ಹೆಚ್ಚಾಗಿದೆಯಾ ಅನ್ನೋದು ಪ್ರಶ್ನೆ. ಹೌದು ಅನ್ನೋದೇ ಉತ್ತರ.
ಕೆಜಿಎಫ್ ಚಾಪ್ಟರ್ 2 ಟ್ರೇಲರ್ ರಿಲೀಸ್ ಆದ ನಂತರ ಅದು ಯಾವ ಭಾಷೆಗಳಲ್ಲಿ ಎಷ್ಟರಮಟ್ಟಿಗೆ ವೀಕ್ಷಣೆ ಪಡೆದಿದೆ ಅನ್ನೋದರ ಮೇಲೆ ಇದರ ಲೆಕ್ಕಾಚಾರವಿದೆ.
ಹಿಂದಿಯಲ್ಲಿ 55 ಮಿಲಿಯನ್, ತಮಿಳಿನಲ್ಲಿ 12 ಮಿಲಿಯನ್, ಮಲಯಾಳಂನಲ್ಲಿ ಸುಮಾರು 9 ಮಿಲಿಯನ್ ಹಾಗೂ ತೆಲುಗಿನಲ್ಲಿ 20 ಮಿಲಿಯನ್ ವೀಕ್ಷಣೆ ಪಡೆದಿದೆ ಕೆಜಿಎಫ್ ಟ್ರೇಲರ್. ಆದರೆ, ಕನ್ನಡದಲ್ಲಿ ಕೆಜಿಎಫ್ ಟ್ರೇಲರ್ ನೋಡಿದವರ ಸಂಖ್ಯೆ 19 ಮಿಲಿಯನ್. ಹೌದು.. ಇದು ಹೊಂಬಾಳೆಯವರ ಅಧಿಕೃತ ಪೇಜ್‍ನ ವೀಕ್ಷಣೆಯ ಲೆಕ್ಕ ಮಾತ್ರ. ಉಳಿದ ಲೆಕ್ಕದ ಮಾತು ಬಿಡಿ.. ಆದರೆ ಯಶ್‍ಗೆ ಕನ್ನಡಕ್ಕಿಂತ ಹಿಂದಿ, ತೆಲುಗಿನಲ್ಲೇ ಹೆಚ್ಚು ಕ್ರೇಜ್ ಇದೆ ಅನ್ನೋ ಮಾತಿಗೆ ಈಗ ಬಲವೂ ಸಿಕ್ಕಿದೆ.
ಅಂದಹಾಗೆ ಕೆಜಿಎಫ್ ಚಾಪ್ಟರ್ 2 ಟ್ರೇಲರ್ ನೋಡಿದವರ ಸಂಖ್ಯೆ ಕೇವಲ 2 ದಿನದಲ್ಲಿ 110 ಮಿಲಿಯನ್ ದಾಟಿದೆ. ಅರ್ಥಾತ್ ಟ್ರೇಲರ್ ನೋಡಿದವರ ಸಂಖ್ಯೆ 11 ಕೋಟಿಗೂ ಹೆಚ್ಚು. ಇದು ಕೇವಲ ಅಧಿಕೃತ ಹೊಂಬಾಳೆ ಪೇಜ್ ಲೆಕ್ಕ ಮಾತ್ರ..