ಜೇಮ್ಸ್ ದಾಖಲೆ ಮೇಲೆ ದಾಖಲೆ ಬರೆಯುತ್ತಲೇ ಇದೆ. ಈಗ ಆ ದಾಖಲೆಗೆ ಹೊಸ ಸೇರ್ಪಡೆ ಬಾಕ್ಸಾಫೀಸ್ ದಾಖಲೆ. ರಿಲೀಸ್ ದಿನವೇ 30 ಕೋಟಿಗೂ ಹೆಚ್ಚು ಕಲೆಕ್ಷನ್ ಮಾಡಿ ಸುದ್ದಿ ಮಾಡಿದ್ದ ಜೇಮ್ಸ್, ಕೇವಲ 4 ದಿನದಲ್ಲಿ 100 ಕೋಟಿ ಕ್ಲಬ್ ಸೇರಿದೆ. ಇಷ್ಟು ವೇಗವಾಗಿ 100 ಕೋಟಿ ಗಳಿಸಿದ ಮೊದಲ ಕನ್ನಡ ಸಿನಿಮಾ ಜೇಮ್ಸ್.
ಚೇತನ್ ಕುಮಾರ್ ನಿರ್ದೇಶನದ ಜೇಮ್ಸ್, ಪುನೀತ್ ರಾಜಕುಮಾರ್ ಹೀರೋ ಆಗಿ ನಟಿಸಿರುವ ಕೊನೆಯ ಸಿನಿಮಾ ಕೂಡಾ. ಜೇಮ್ಸ್ ಚಿತ್ರದ ಸ್ಯಾಟಲೈಟ್, ಆಡಿಯೋ, ಒಟಿಟಿ, ಡಬ್ಬಿಂಗ್ ರೈಟ್ಸ್‍ಗಳಲ್ಲೂ ದಾಖಲೆ ಪ್ರಮಾಣದ ಗಳಿಕೆ ಬರೆದಿದೆ. ನಿರ್ಮಾಪಕರಿಗೆ 80 ಕೋಟಿಗೂ ಹೆಚ್ಚು ಲಾಭ ಬರಲಿದೆ ಎಂಬ ನಿರೀಕ್ಷೆ ಚಿತ್ರರಂಗದಲ್ಲಿದೆ.
ನಿರ್ಮಾಪಕ ಕಿಶೋರ್ ಪತ್ತಿಕೊಂಡ ಅಧಿಕೃತವಾಗಿ ಬಾಕ್ಸಾಫೀಸ್ ಮತ್ತು ಇತರೆ ಲೆಕ್ಕಗಳನ್ನು ಕೊಟ್ಟಿಲ್ಲ. ಅಫ್‍ಕೋರ್ಸ್, ಚಿತ್ರದ ಬಜೆಟ್ ಬಗ್ಗೆಯಾಗಲೀ, ಪುನೀತ್ ಸಂಭಾವನೆಯ ವಿಷಯವನ್ನಾಗಲೀ ಅವರು ಮಾತನಾಡಿಯೇ ಇಲ್ಲ. 100 ಕೋಟಿಯಂತೆ ನಿಜವಾ ಎಂದರೆ ಹೌದು ಎಂದೂ ಹೇಳಿಲ್ಲ. ಇಲ್ಲ ಎಂದೂ ಹೇಳಿಲ್ಲ.