` ತಾಳ್ಮೆ.. ಅಹಂ.. ಶಕ್ತಿ.. ಮೂರು ಕೋನಗಳ ತ್ರಿಕೋನ - chitraloka.com | Kannada Movie News, Reviews | Image

User Rating: 0 / 5

Star inactiveStar inactiveStar inactiveStar inactiveStar inactive
 
ತಾಳ್ಮೆ.. ಅಹಂ.. ಶಕ್ತಿ.. ಮೂರು ಕೋನಗಳ ತ್ರಿಕೋನ
Trikona Movie Image

ಒಂದೇ ಸಮಸ್ಯೆ.. ಮೂರು ವಿಭಿನ್ನ ತಲೆಮಾರು.. ಮೂರು ವಯೋಮಾನದವರು.. ಒಬ್ಬೊಬ್ಬರದ್ದೂ ಒಂದೊಂದು ಮಾರ್ಗ. ಆ ಮಾರ್ಗಗಳೇ ತಾಳ್ಮೆ.. ಅಹಂ.. ಶಕ್ತಿ...

ಇದೇ ತ್ರಿಕೋನದ ಕಥೆ. ಒಂದು ಸಮಸ್ಯೆಯನ್ನು ತಾಳ್ಮೆ.. ಅಹಂ.. ಶಕ್ತಿ..ಮೂರೂ ಮಾರ್ಗಗಳನ್ನು ಬಳಸಿ ಜಯಿಸಬೇಕು ಅನ್ನೋದು ಚಿತ್ರದ ಒನ್‍ಲೈನ್ ಸ್ಟೋರಿ. ಕಥೆ ಸ್ವತಃ ನಿರ್ಮಾಪಕ ರಾಜಶೇಖರ್ ಅವರದ್ದು. ಅವರಿಗೆ ಈ ಹಿಂದೆ ಪೆರೋಲ್, ಬರ್ಫಿ, ಅಮೃತವಾಣಿಯಂತಾ ಚಿತ್ರಗಳನ್ನು ನಿರ್ಮಿಸಿದ್ದ ಅನುಭವವಿದೆ. ನಿರ್ದೇಶನವೂ ಗೊತ್ತಿದೆ. ಆದರೆ ಈ ಚಿತ್ರಕ್ಕೆ ಚಂದ್ರಕಾಂತ್ ಡೈರೆಕ್ಟರ್.

ಸುಧಾರಾಣಿ, ಅಚ್ಯುತ್ ಕುಮಾರ್, ಲಕ್ಷ್ಮೀ, ಸುರೇಶ್ ಹೆಬ್ಳೀಕರ್ ಪ್ರಧಾನ ಪಾತ್ರದಲ್ಲಿರೋ ಚಿತ್ರಕ್ಕೆ ಸುಚೇಂದ್ರ ಪ್ರಸಾದ್ ಪ್ರಚಾರ ರಾಯಭಾರಿ.