ಅದ್ವಿಕಾಗೆ ಇದು ಮೊದಲ ಸಿನಿಮಾ. ನಾಯಕಿ. ಹೀರೋ ಆಗಿರೋದು ಲೂಸ್ ಮಾದ ಯೋಗಿ. ಕಿರಿಕ್ ಶಂಕರ್ ಚಿತ್ರ ಇದೇ ಏಪ್ರಿಲ್ 1ಕ್ಕೆ ಬರುತ್ತಿದೆ. ಅನಂತರಾಜು ನಿರ್ದೇಶನದ ಚಿತ್ರದಲ್ಲಿ ಪಕ್ಕಾ ಕಮರ್ಷಿಯಲ್ ಕಥೆ ಇದೆ ಅನ್ನೋದು ಅದ್ವಿಕಾ ಮಾತು.
ನಾನು ರಂಗಭೂಮಿಯಿಂದ ಬಂದವಳು. ಇದು ನನಗೆ ಮೊದಲ ಸಿನಿಮಾ. ಈ ಚಿತ್ರ ಒಪ್ಪಿಕೊಂಡ ಮೇಲೆ ರಕ್ತಚಂದನ ಅನ್ನೋ ವೆಬ್ ಸಿರೀಸ್‍ನಲ್ಲಿ ನಟಿಸಿದೆ. ಈ ಚಿತ್ರದಲ್ಲಿ ಒಳ್ಳೆಯ ಕಥೆ ಇದೆ. ಕಾಮಿಡಿ, ಆ್ಯಕ್ಷನ್ ಎಲ್ಲವೂ ಇರೋ ಪಕ್ಕಾ ಕಮರ್ಷಿಯಲ್ ಎಂಟರ್‍ಟೈನರ್ ಎನ್ನುತ್ತಾರೆ ಅದ್ವಿಕಾ.
ಎಂ.ಎನ್.ಕುಮಾರ್ ನಿರ್ಮಾಣದ ಚಿತ್ರದ ಆಡಿಯೋ ರಿಲೀಸ್ ಆಗಿದ್ದು ಒಳ್ಳೆಯ ರೆಸ್ಪಾನ್ಸ್ ಸಿಗುತ್ತಿದೆ.