ಒಂದು ಸಮಸ್ಯೆ ಅಥವಾ ಸವಾಲು. ಆ ಸಮಸ್ಯೆಯನ್ನು 20-25 ವರ್ಷದ ಮಕ್ಕಳು ಹೇಗೆ ನಿಭಾಯಿಸುತ್ತಾರೆ..? 40-60ರ ವಯಸ್ಸಿನ ತಂದೆ ತಾಯಿ ಹೇಗೆ ನಿಭಾಯಿಸುತ್ತಾರೆ..? ತಾಳ್ಮೆ, ಸಹನೆ ಅನ್ನೋದು ಎಷ್ಟು ಮುಖ್ಯ..? ಇಂತಾ ಅಂಶಗಳನ್ನಿಟ್ಟುಕೊಂಡು ಸಿದ್ಧವಾಗಿರೋ ಸಿನಿಮಾ ತ್ರಿಕೋನ. ಹಾಗಂತ ಇದು ಆರ್ಟ್ ಸಿನಿಮಾ. ಕಲಾತ್ಮಕತೆ ಶೈಲಿಯಲ್ಲಿ ಸಿದ್ಧವಾಗಿರೋ ಕಮರ್ಷಿಯಲ್ ಸಿನಿಮಾ..
ಹೀಗೆ ತಮ್ಮ ತ್ರಿಕೋನ ಚಿತ್ರದ ಕಾನ್ಫಿಡೆನ್ಸ್ ಆಗಿ ಹೇಳಿರೋದು ಬಿ.ಆರ್. ನಿರ್ಮಾಪಕ ರಾಜಶೇಖರ್. ಬರ್ಫಿ, ಪರೋಲ್ ಚಿತ್ರಕ್ಕೆ ಆ್ಯಕ್ಷನ್ ಕಟ್ ಹೇಳಿದ್ದ ರಾಜಶೇಖರ್ ಈ ಚಿತ್ರಕ್ಕೆ ಪ್ರೊಡ್ಯೂಸರ್. ಕಥೆಗಾರರೂ ಅವರೇ. ನಿರ್ದೇಶನದ ಜವಾಬ್ದಾರಿಯನ್ನು ಚಂದ್ರಕಾಂತ್ ಅವರ ಹೆಗಲಿಗೆ ಹೊರಿಸಿದ್ದಾರೆ.
ಅಚ್ಯುತ್ ಕುಮಾರ್, ಸುಧಾರಾಣಿ, ಲಕ್ಷ್ಮಿ, ಸುರೇಶ್ ಹೆಬ್ಳೀಕರ್.. ಹೀಗೆ ದೊಡ್ಡ ದೊಡ್ಡ ಕಲಾವಿದರ ಸೈನ್ಯವನ್ನೇ ಇಟ್ಟುಕೊಂಡು ಸಿನಿಮಾ ಮಾಡಿದ್ದಾರೆ. ಪಿ.ಶೇಷಾದ್ರಿ, ಸುಚೇಂದ್ರ ಪ್ರಸಾದ್ ಮೊದಲಾದವರು ಈಗಾಗಲೇ ಸಿನಿಮಾ ನೋಡಿ ಬೆನ್ನು ತಟ್ಟಿದ್ದಾರೆ. ಸಿನಿಮಾ ಏಪ್ರಿಲ್ 1ಕ್ಕೆ ರಿಲೀಸ್ ಆಗುತ್ತಿದೆ.