ದಿನಕರ್ ತೂಗುದೀಪ ಅವರ ಬಹುವರ್ಷಗಳ ಕನಸು ನನಸಾಗುವ ಹಾದಿಯಲ್ಲಿತ್ತು. ದಿನಕರ್ ಸಿದ್ಧಪಡಿಸಿದ್ದ ಸ್ಕ್ರಿಪ್ಟ್‍ಗೆ ಪುನೀತ್ ಓಕೆ ಎಂದಿದ್ದರು. ಜೇಮ್ಸ್ ಮುಗಿದ ನಂತರ ದ್ವಿತ್ವ ಜೊತೆ ಜೊತೆಯಲ್ಲೇ ಶುರುವಾಗಬೇಕಿದ್ದ ಸಿನಿಮಾ ಅದು. ಜಯಣ್ಣ ಭೋಗೇಂದ್ರ ನಿರ್ಮಾಪಕರಾಗಿ ಸಿದ್ಧರಿದ್ದರು. ದುರದೃಷ್ಟವಶಾತ್ ಅಪ್ಪು ಅಗಲಿದರು. ಈಗ ಆ ಚಿತ್ರಕ್ಕೆ ಕಿಸ್ ಮೂಲಕ ಬೆಳಕಿಗೆ ಬಂದ ಪ್ರತಿಭೆ ವಿರಾಟ್ ಬಂದಿದ್ದಾರೆ.
ಕಿಸ್ ಚಿತ್ರದಲ್ಲಿ ಒಳ್ಳೆಯ ಕಲಾವಿದನಾಗುವ ಎಲ್ಲ ಭರವಸೆ ಮೂಡಿಸಿದ್ದ ವಿರಾಟ್, ಈಗ ಅರ್ಜುನ್ ಅವರ ಜೊತೆಯಲ್ಲೇ ಅದ್ಧೂರಿ ಲವರ್ ಚಿತ್ರದಲ್ಲೂ ನಟಿಸುತ್ತಿದ್ದಾರೆ.
ಕಥೆ ಕೇಳಿದ ಮೇಲೆ, ಈ ಕಥೆಗೆ ವಿರಾಟ್ ಪರ್ಫೆಕ್ಟ್ ಆಗಿ ಸೂಟ್ ಆಗುತ್ತಾರೆ ಎಂದರು ಜಯಣ್ಣ. ನನಗೂ ಓಕೆ ಎನ್ನಿಸಿತು. ಇದೊಂದು ಕಮರ್ಷಿಯಲ್ ಎಲಿಮೆಂಟ್ ಇರುವ ಥ್ರಿಲ್ಲರ್ ಸ್ಟೋರಿ ಅನ್ನೋದು ದಿನಕರ್ ಮಾತು.
ಆದರೆ ಅದು ಅಪ್ಪುಗಾಗಿಯೇ ಸಿದ್ಧ ಮಾಡಿದ್ದ ಕಥೆನಾ? ಅಥವಾ ಬೇರೆ ಕಥೆನಾ..? ಅದು ಸದ್ಯಕ್ಕೆ ಗೊತ್ತಾಗಿಲ್ಲ.