*'ಬಾಗ್ಲು ತೆಗಿ ಮೇರಿ ಜಾನ್' ಬೊಂಬಾಟ್ ಹಿಟ್*
ನವರಸ ನಾಯಕ ಜಗ್ಗೇಶ್ ನಟನೆಯ `ತೋತಾಪುರಿ' ಸಾಕಷ್ಟು ವಿಷಯಗಳಿಂದ ಸದ್ದು ಮಾಡುತ್ತಿದೆ. ಕರ್ನಾಟಕ ಸೇರಿದಂತೆ ದೇಶ-ವಿದೇಶದಲ್ಲೂ ಈ ಸಿನಿಮಾದ ಹಾಡಿನ ಬಗ್ಗೆ ಸಾಕಷ್ಟು ಮೆಚ್ಚುಗೆ ವ್ಯಕ್ತವಾಗುತ್ತಿದೆ. ಇತ್ತೀಚೆಗೆ ಬಿಡುಗಡೆಯಾದ `ಬಾಗ್ಲು ತೆಗಿ ಮೇರಿ ಜಾನ್' ಹಾಡು 100 ಮಿಲಿಯನ್‌ಗೂ ಅಧಿಕ ಹಿಟ್‌್ಸ ದಾಖಲಿಸಿ ಮುನ್ನುಗ್ಗುತ್ತಿದೆ.
`ಮೋನಿಫ್ಲಿಕ್‌್ಸ ಆಡಿಯೋಸ್' ಯೂ ಟ್ಯೂಬ್ ಚಾನಲ್‌ನಲ್ಲಿ ಅಧಿಕೃತವಾಗಿ ಬಿಡುಗಡೆಯಾಗಿದ್ದು, ಈ ಹಾಡಿಗೆ ಪ್ರಸ್ತುತ ಚಾನಲ್‌ವೊಂದರಲ್ಲೇ 15 ಮಿಲಿಯನ್‌ಗೂ ಅಧಿಕ ಹಿಟ್‌್ಸ ದಾಖಲಾಗಿದೆ. ಅಲ್ಲದೇ ಸಾಮಾಜಿಕ ಜಾಲತಾಣದಲ್ಲಿ 85 ಮಿಲಿಯನ್‌ಗೂ ಅಧಿಕ ಹಿಟ್‌್ಸ ದಾಖಲಾಗಿರುವುದು `ತೋತಾಪುರಿ' ಹೆಚ್ಚುಗಾರಿಕೆ. ಇತ್ತೀಚೆಗೆ ಬಂದ ಹಾಡುಗಳ ಪೈಕಿ ದೊಡ್ಡ ಮಟ್ಟದಲ್ಲಿ ಜನರನ್ನು ಸೆಳೆದ ಹಾಡು ಇದಾಗಿದ್ದು, ದಿನದಿಂದ ದಿನಕ್ಕೆ ಕ್ರೇಜ್ ಹೆಚ್ಚಿಸುತ್ತಲೇ ಇದೆ. ಯೂ ಟ್ಯೂಬ್ ರೀಲ್‌್ಸ, ಶಾರ್ಟ್‌್ಸ ಹಾಗೂ ಸ್ಟೋರಿಸ್‌ಗಳಲ್ಲಿ ಈ ಹಾಡಿನ ತುಣುಕಿಗೆ ಡಾನ್‌್ಸ ಮಾಡಿ ಅಪ್ಲೋಡ್ ಮಾಡಿರುವುದು ವಿಶೇಷ. ವಿದೇಶದಲ್ಲಿ ನೆಲೆಸಿರುವ ಕನ್ನಡಿಗರಿಗೂ ಈ ಹಾಡು ಇಷ್ಟವಾಗಿರುವುದು `ತೋತಾಪುರಿ' ಹಾಡಿನ ವಿಶೇಷ.
ನಿರ್ದೇಶಕ ವಿಜಯಪ್ರಸಾದ್ ಅವರೇ ಈ ಹಾಡಿಗೆ ಸಾಹಿತ್ಯ ರಚಿಸಿದ್ದು, ಅನೂಪ್ ಸೀಳಿನ್ ಸಂಗೀತ ಸಂಯೋಜಿಸಿದ್ದಾರೆ. ಮೋಜ್, ಇನ್ಸ್ಟಾಗ್ರಾಮ್, ಯೂ ಟ್ಯೂಬ್ ರೀಲ್‌್ಸ, ಶೇರ್ ಚಾಟ್, ಮ್ಯಾಕ್ ಟಕಾ ಟಕ್ ಸೇರಿದಂತೆ ಹಲವಾರು ಆ್ಯಪ್‌ಗಳಲ್ಲಿ ಈ ಹಾಡಿನ ತುಣುಕುಗಳಿರುವ ವೀಡಿಯೋಗಳು ಸಖತ್ ಸದ್ದು ಮಾಡುತ್ತಿವೆ.
ಪ್ಯಾನ್ ಇಂಡಿಯಾ ಮಟ್ಟದಲ್ಲಿ ತಯಾರಾಗಿರುವ ಮೊದಲ ಕನ್ನಡ ಕಾಮಿಡಿ ಸಿನಿಮಾ ಎಂಬುದು ಒಂದೆಡೆಯಾದರೆ, ಏಕಕಾಲದಲ್ಲಿ ತೋತಾಪುರಿ ಸಿನಿಮಾ ಎರಡು ಭಾಗಗಳಾಗಿ ತಯಾರಾಗಿದೆ ಎಂಬುದು ಮತ್ತೊಂದು ವಿಶೇಷ. ಕೆ.ಎ.ಸುರೇಶ್ ನಿರ್ಮಾಣವಿರುವ ಈ ಸಿನಿಮಾದ ಮೊದಲ ಭಾಗ ಸದ್ಯದಲ್ಲೇ ಬಿಡುಗಡೆಯಾಗಲಿದ್ದು, ನಂತರ ಮತ್ತೊಂದು ಭಾಗವನ್ನು ರಿಲೀಸ್ ಮಾಡಲಿದೆ ಚಿತ್ರತಂಡ. `ಡಾಲಿ' ಧನಂಜಯ್, ಅದಿತಿ ಪ್ರಭುದೇವ, ಸುಮನ್ ರಂಗನಾಥ್, ದತ್ತಣ್ಣ, ವೀಣಾ ಸುಂದರ್, ಹೇಮಾದತ್ ಮೊದಲಾದವರು ಚಿತ್ರದಲ್ಲಿದ್ದಾರೆ.