KGF Chapter 2. ಪ್ರೇಕ್ಷಕರು ಹೆಚ್ಚೂ ಕಡಿಮೆ 2 ವರ್ಷದಿಂದ ಕಾಯುತ್ತಿರೋ ಸಿನಿಮಾ. ಏಪ್ರಿಲ್ 14ಕ್ಕೆ ರಿಲೀಸ್ ಆಗಲಿರೋ ಚಿತ್ರದ ಟ್ರೇಲರ್ ರಿಲೀಸ್ ಯಾವಾಗ ಅನ್ನೋ ಪ್ರಶ್ನೆಗೆ ಈಗ ಅಧಿಕೃತ ಉತ್ತರ ಸಿಕ್ಕಿದೆ. ಮಾರ್ಚ್ 27. ಸಂಜೆ 6 ಗಂಟೆ 40 ನಿಮಿಷಕ್ಕೆ ಟ್ರೇಲರ್ ರಿಲೀಸ್ ಆಗಲಿದೆ.
ಕಳೆದ ಬಾರಿ ರಿಲೀಸ್ ಆಗಿದ್ದ ಟೀಸರ್ ವಿಶ್ವ ದಾಖಲೆ ಬರೆದಿತ್ತು. ಈಗ ಟ್ರೇಲರ್ ಬರುತ್ತಿದೆ. ದಾಖಲೆಗಳು ಪುಡಿ ಪುಡಿಯೋಗೋಕೆ ರೆಡಿಯಾಗಿ ನಿಂತಿವೆ.
ಪ್ರಶಾಂತ್ ನೀಲ್ ನಿರ್ದೇಶನ. ವಿಜಯ್ ಕಿರಗಂದೂರು ನಿರ್ಮಾಣದ ಚಿತ್ರದಲ್ಲಿ ಯಶ್, ಸಂಜಯ್ ದತ್, ರವೀನಾ ಟಂಡನ್, ಶ್ರೀನಿಧಿ ಶೆಟ್ಟಿ, ಪ್ರಕಾಶ್ ರೈ ಸೇರಿದಂತೆ ಘಟಾನುಘಟಿಗಳು ನಟಿಸಿದ್ಧಾರೆ. ಚಾಪ್ಟರ್ 1 ಸೂಪರ್ ಹಿಟ್ ಆಗಿ, ಬಾಕ್ಸಾಫೀಸ್ ದೂಳೆಬ್ಬಿಸಿತ್ತು. ಈಗ ಕೆಜಿಎಫ್ ಚಾಪ್ಟರ್ 2 ಸರದಿ.
--