ಕನ್ನಡದಲ್ಲಿ ಹೊಸ ದಾಖಲೆ ಬರೆಯಲಿದೆ ಎಂದು ನಿರೀಕ್ಷೆ ಇಟ್ಟುಕೊಂಡಿರೋ ಸಿನಿಮಾ ವಿಕ್ರಾಂತ್ ರೋಣ. ಹಲವು ಭಾಷೆಗಳಲ್ಲಿ ಏಕಕಾಲಕ್ಕೆ ಹಲವು ದೇಶಗಳಲ್ಲಿ ರಿಲೀಸ್ ಮಾಡಿ ದಾಖಲೆ ಬರೆಯಲು ಹೊರಟಿರೋ ಚಿತ್ರವಿದು. ಈ ಕನ್ನಡದ ಚಿತ್ರ ಈಗ ಇಂಗ್ಲಿಷ್‍ನಲ್ಲೂ ಬರಲಿದೆ ಅನ್ನೋದು ಪಕ್ಕಾ ನ್ಯೂಸ್. ಚಿತ್ರದ ಇಂಗ್ಲಿಷ್ ಡಬ್ಬಿಂಗ್‍ನ್ನು ಸ್ವತಃ ಸುದೀಪ್ ಈಗಾಗಲೇ ಮುಗಿಸಿಕೊಟ್ಟಿದ್ದಾರೆ. ಇದೂ ಒಂದು ದಾಖಲೆಯೇ. ಇಂಗ್ಲಿಷ್ ಭಾಷೆಗೆ ಡಬ್ಬಿಂಗ್ ಮಾಡಿದ ಮೊದಲ ಕನ್ನಡ ನಟ ಸುದೀಪ್.
ಕಿಚ್ಚ ಸುದೀಪ್, ಅನೂಪ್ ಭಂಡಾರಿ ಕಾಂಬಿನೇಷನ್‍ನ ಸಿನಿಮಾ ವಿಕ್ರಾಂತ್ ರೋಣ. ನಿರೂಪ್ ಭಂಡಾರಿ, ನೀತು ಅಶೋಕ್, ರವಿಶಂಕರ್ ಗೌಡ, ಜಾಕ್ವೆಲಿನ್ ಫರ್ನಾಂಡಿಸ್ ನಟಿಸಿರೋ ಚಿತ್ರವಿದು.
ಜಾಕ್ ಮಂಜು ನಿರ್ಮಾಣದ ಚಿತ್ರ 3ಡಿ ವರ್ಷನ್‍ನಲ್ಲೂ ಬರಲಿದೆ. ಕನ್ನಡ, ಇಂಗ್ಲಿಷ್ ಸೇರಿದಂತೆ ಒಟ್ಟು 10 ಭಾಷೆಗಳಲ್ಲಿ ರಿಲೀಸ್ ಆಗಲಿದೆ.