` ಅಮೂಲ್ಯಗೆ ಅವಳಿ ಜವಳಿ - chitraloka.com | Kannada Movie News, Reviews | Image

User Rating: 0 / 5

Star inactiveStar inactiveStar inactiveStar inactiveStar inactive
 
ಅಮೂಲ್ಯಗೆ ಅವಳಿ ಜವಳಿ
Amulya, Jagadish

ನಟಿ ಅಮೂಲ್ಯ ಶಿವರಾತ್ರಿಯಂದೇ ಅವಳಿ ಮಕ್ಕಳ ತಾಯಿಯಾಗಿದ್ದಾರೆ. ಅಮೂಲ್ಯ ಜಗದೀಶ್ ದಂಪತಿಗೆ ಅವಳಿ ಜವಳಿ ಮಕ್ಕಳು. ಮಂಗಳವಾರ ಬೆಳಗ್ಗೆ 11.45ಕ್ಕೆ ಜಯನಗರದ ಖಾಸಗಿ ಆಸ್ಪತ್ರೆಯಲ್ಲಿ ಎರಡು ಗಂಡು ಮಕ್ಕಳಿಗೆ ಜನ್ಮ ನೀಡಿದ್ದಾರೆ ಅಮೂಲ್ಯ.

ತಾಯಿ ಮಕ್ಕಳಿಬ್ಬರೂ ಆರೋಗ್ಯವಾಗಿದ್ದಾರೆ. ನಿಮ್ಮ ಪ್ರೀತಿ ಆಶೀರ್ವಾದ ಇರಲಿ ಎಂದಿದ್ದಾರೆ ಪತಿ ಜಗದೀಶ್. ಚಿತ್ರರಂಗದ ತಾರೆಯರು ಸೇರಿದಂತೆ ಅಭಿಮಾನಿಗಳು ಅಮೂಲ್ಯ ಮತ್ತು ಮಕ್ಕಳಿಗೆ ಶುಭ ಹಾರೈಸಿದ್ದಾರೆ.