ದುನಿಯಾ ವಿಜಯ್ ಹೊಸ ಸಿನಿಮಾದ ಸೀಕ್ರೆಟ್ ಬಿಟ್ಟುಕೊಟ್ಟಿದ್ದಾರೆ. ಶಿವರಾತ್ರಿಯಂದೇ ತಮ್ಮ ಹೊಸ ಸಿನಿಮಾದ ಟೈಟಲ್ ರಿವೀಲ್ ಮಾಡಿದ್ದಾರೆ. ಹೊಸ ಚಿತ್ರದ ಟೈಟಲ್ಲೇ ಇದು. ಭೀಮ.. ಕೆಣಕದೇ ಇದ್ದರೆ ಕ್ಷೇಮ ಅನ್ನೋದು ಟ್ಯಾಗ್‍ಲೈನ್.
ಇದೂ ಕತ್ತಲ ಜಗತ್ತಿನ ಕಥೆಯೇ. ಆದರೆ ನಾವು ಹೇಳೋದು ಕತ್ತಲ ಜಗತ್ತಿನ ಬ್ರೈಟ್ ಸ್ಟೋರಿ. ಭೀಮ, ಪಂಚಪಾಂಡವರಲ್ಲೇ ಮಹಾನ್ ಶಕ್ತಿಶಾಲಿ. ಸಾವಿರ ಆನೆಗಳ ಬಲದವನು. ಶಾಂತವಾಗಿದ್ದಾಗ ಅವನಷ್ಟು ಒಳ್ಳೆಯವನು ಇನ್ನೊಬ್ಬ ಇಲ್ಲ. ಕೆಣಕಿದರೆ.. ಅದೇ ನಮ್ಮ ಚಿತ್ರದ ಕಥೆ ಎನ್ನುತ್ತಾರೆ ಸಲಗ ವಿಜಯ್.
ಈ ಚಿತ್ರಕ್ಕೆ ಕಥೆ, ಚಿತ್ರಕಥೆ ಅವರದ್ದೇ. ಸಂಭಾಷಣೆ ಮಾಸ್ತಿಯವರದ್ದು. ಸದ್ಯಕ್ಕೆ ತೆಲುಗಿನಲ್ಲಿ ನಟಿಸುತ್ತಿರೋ ವಿಜಯ್, ಆ ಚಿತ್ರದ ಶೂಟಿಂಗ್ ನಡುವೆಯೇ ಭೀಮ ಚಿತ್ರದ ಕಥೆಗೆ ಫೈನಲ್ ಟಚ್ ಕೊಡುತ್ತಿದ್ದಾರೆ. ನಂತರ ಕನ್ನಡಕ್ಕೆ ಬಂದರೆ ಶ್ರೇಯಸ್ ಮಂಜು ಚಿತ್ರದಲ್ಲೊಂದು ಕ್ಯಾಮಿಯೋ ಪಾತ್ರ ಮಾಡಬೇಕಿದೆ. ಅವೆರಡೂ ಮುಗಿದ ಮೇಲೆ ಸಲಗ ಸೆಟ್ಟೇರಲಿದೆ.
ಕೃಷ್ಣ ಸಾರ್ಥಕ್ ಮತ್ತು ಜಗದೀಶ್ ಗೌಡ ನಿರ್ಮಾಪಕರಾಗಿರೋ ಚಿತ್ರಕ್ಕೆ ತಾಂತ್ರಿಕ ವರ್ಗ ಒಂದು ಹಂತಕ್ಕೆ ಫೈನಲ್ ಆಗಿದೆ. ಕ್ಯಾಮೆರಾಗೆ ಶಿವಸೇನಾ, ಸಂಗೀತಕ್ಕೆ ಚರಣ್ ರಾಜ್ ಇದ್ದಾರೆ. ಉಳಿದಂತೆ ತಾರಾಗಣ ಸೇರಿದಂತೆ ಹಲವು ಕೆಲಸಗಳಿನ್ನೂ ಬಾಕಿಯಿವೆ.