ನಿಮಗೆ ಹಾಡು ಬೇಕಾ..? ಒಂದನ್ನು ಒತ್ತಿ..
ನಿಮಗೆ ಟ್ರೇಲರ್ ಬೇಕಾ..? ಎರಡನ್ನು ಒತ್ತಿ..
ಸರ್‍ಪ್ರೈಸ್ ಬೇಕಾ..? ಮೂರನ್ನು ಒತ್ತಿ..
ಇಂತಾದ್ದೊಂದು ಅಚ್ಚರಿಯ ವೋಟಿಂಗ್ ಸ್ಪರ್ಧೆ ಇಟ್ಟಿದೆ ಕೆಜಿಎಫ್ ಚಾಪ್ಟರ್ 2. ಪ್ರೇಕ್ಷಕರೇ ಚಾಯ್ಸ್ ನೀಡಬೇಕು. ಇದರ ಅರ್ಥ ಇಷ್ಟೆ.. ಕೆಜಿಎಫ್ ಟೀಂ, ಈ ಮೂರಕ್ಕೂ ಸಿದ್ಧವಾಗಿದೆ. ಯಾವುದು ಮೊದಲು ಅನ್ನೋದನ್ನ ಪ್ರೇಕ್ಷಕರೇ ನಿರ್ಧರಿಸಬೇಕು. ಪ್ರಚಾರದ ಹೊಸ ವೈಖರಿಯನ್ನು ಪರಿಚಯಿಸುತ್ತಿದೆ ಕೆಜಿಎಫ್ ಟೀಂ.
ಏಪ್ರಿಲ್ 14ಕ್ಕೆ ಕೆಜಿಎಫ್ ಚಾಪ್ಟರ್ 2 ರಿಲೀಸ್ ಆಗುತ್ತಿದೆ. ಈಗಿನ್ನೂ ಫೆಬ್ರವರಿ ಅಂತ್ಯದಲ್ಲಿದ್ದೇವೆ. ಇನ್ನು ಒಂದೂವರೆ ತಿಂಗಳು ಕಂಪ್ಲೀಟ್ ಕೆಜಿಎಫ್ ಪ್ರಚಾರ ಬಿರುಗಾಳಿಯಾಗಬೇಕು. ಬಿರುಗಾಳಿಯ ಮೊದಲ ಹಂತವೇ ವೋಟಿಂಗ್ ಪ್ರಚಾರ..