ವಿಕೆ 28. ಹೀಗೊಂದು ಪೋಸ್ಟರ್ ರಿಲೀಸ್ ಆಗಿದೆ. ಅಲ್ಲಿರೋದು ರಕ್ತಸಿಕ್ತ ಕೈಗಳೊಂದಿಗೆ ಆರ್ಎಕ್ಸ್ 100 ಬೈಕು ಓಡಿಸುತ್ತಿರೋ ಪೋಸ್ಟರು. ಅಷ್ಟೆ.. ಅದು ವಿಜಯ್ ಅವರ 28ನೇ ಸಿನಿಮಾದ ಪೋಸ್ಟರ್.
ಟೈಟಲ್ ಏನು? ಕಥೆ ಏನು? ಕಲಾವಿದರು ಯಾರು? ಹೀಗೆ ಯಾವೊಂದು ಪ್ರಶ್ನೆಗೂ ಅಲ್ಲಿ ಉತ್ತರ ಸಿಕ್ಕಿಲ್ಲ. ಕನ್ಫರ್ಮ್ ಆಗಿರೋದು ಇಷ್ಟೆ, ಸಲಗದ ಸಕ್ಸಸ್ ನಂತರ ಈ ಚಿತ್ರಕ್ಕೂ ದುನಿಯಾ ವಿಜಯ್ ಅವರೇ ಡೈರೆಕ್ಟರ್. ನಿರ್ಮಾಪಕರಾಗಿರೋದು ಕೃಷ್ಣ ಸಾರ್ಥಕ್ ಮತ್ತು ಜಗದೀಶ್ ಗೌಡ.
ಶಿವಣ್ಣ ಅವರ ಬೈರಾಗಿ ಚಿತ್ರವನ್ನು ನಿರ್ಮಿಸುತ್ತಿರುವವರೇ ದುನಿಯಾ ವಿಜಯ್ ಹೊಸ ಚಿತ್ರಕ್ಕೆ ಬಂಡವಾಳ ಹಾಕುತ್ತಿದ್ದಾರೆ. ಉಳಿದಂತೆ ಚಿತ್ರದ ಒಂದಿಷ್ಟು ವಿವರಗಳು ಶಿವರಾತ್ರಿ ಹಬ್ಬದ ದಿನ ಹೊರಬೀಳಲಿವೆ.