ಈ ವಾರ ರಿಲೀಸ್ ಆಗಿರೋ ಏಕ್ ಲವ್ ಯಾ ಚಿತ್ರಕ್ಕೆ ಪ್ರೇಕ್ಷಕರು ಬಹುಪರಾಕ್ ಎಂದಿದ್ದಾರೆ. ಎಕ್ಸ್‍ಕ್ಯೂಸ್ ಮಿ ನಂತರ ಲವ್ ಸ್ಟೋರಿ ಮಾಡಿದ್ದ ಪ್ರೇಮ್, ಗೆದ್ದಿದ್ದಾರೆ. ರಕ್ಷಿತಾ ಪ್ರೇಮ್ ಅವರ ತಮ್ಮ ರಾಣಾ ಈ ಚಿತ್ರದ ಮೂಲಕ ಹೀರೋ ಆಗಿದ್ದಾರೆ. ಬಾವ ಬಾಮೈದ ಅನ್ನೋ ರಿಲ್ಯಾಕ್ಸ್ ಇರಲಿಲ್ಲ. ಬೈಸಿಕೊಂಡಿದ್ದು, ಉಗಿಸಿಕೊಂಡಿದ್ದು ಎಲ್ಲವೂ ಇದೆ. ಪ್ರೇಮ್ ಡೈರೆಕ್ಷನ್ ಮಾಡೋಕೆ ನಿಂತಾಗ ಡೈರೆಕ್ಟರ್ ಮಾತ್ರ. ಅಲ್ಲಿ ಸಂಬಂಧಗಳಿರೋದಿಲ್ಲ ಎಂದಿದ್ದರು ರಾಣಾ.
ಪ್ರೇಮ್ ಅವರ ಆ ಎಲ್ಲ ಶ್ರಮದ ಪ್ರತಿಫಲವೇ ರಾಣಾ. ಏಕ್ ಲವ್ ಯಾ ನೋಡಿದವರಿಗೆ ಕನ್ನಡಕ್ಕೆ ಹೊಸ ಹೀರೋ ಸಿಕ್ಕ ಅಂತನ್ನಿಸದೇ ಇರದು. ಎಮೋಷನ್ಸ್, ಆ್ಯಕ್ಷನ್, ತುಂಟಾಟ, ಮುಗ್ದತೆ, ತರಲೆ.. ಹೀಗೆ ಎಲ್ಲದರಲ್ಲೂ ಗೆದ್ದಿರೋ ರಾಣಾ ಹೊಸ ಹುಡುಗ ಅನ್ನಿಸಲ್ಲ ಅನ್ನೋದು ಅವರಿಗೆ ಸಿಕ್ಕಿರೋ ಕಾಂಪ್ಲಿಮೆಂಟು. ವಾಯ್ಸ್ ಮಾಡ್ಯುಲೇಷನ್ ಕಡೆ ಇನ್ನೊಂದಿಷ್ಟು ಗಮನ ಹರಿಸಿದರೆ ಇನ್ನೂ ಒಳ್ಳೆಯದು.