ಏಕ್ ಲವ್ ಯಾ ರಿಲೀಸ್ ಆಗಿದೆ. ಪ್ರೀಮಿಯರ್ ಷೋನಲ್ಲಿ ಎಲ್ಲರೂ ಚಿತ್ರವನ್ನು ಮೆಚ್ಚಿಕೊಂಡಿದ್ದಾರೆ. ಇದು ರಕ್ಷಿತಾ ತಮ್ಮ ರಾಣಾನನ್ನು ಹೀರೋ ಆಗಿ ಪರಿಚಯಿಸುತ್ತಿರೋ ಸಿನಿಮಾ. ಪ್ರೇಮ್ ನಿರ್ದೇಶಕ. ಈ ವೇಳೆ ರಕ್ಷಿತಾ ಹೇಳಿದ ಸ್ವಾರಸ್ಯದ ಕಥೆಗಳು ಇಲ್ಲಿವೆ.
ರಕ್ಷಿತಾ ಫಿಲ್ಮ್ ಫ್ಯಾಕ್ಟರಿ ಶುರು ಮಾಡಿದ್ದೇ ನನ್ನ ತಮ್ಮನಿಗಾಗಿ. ಅವನನ್ನು ಹೀರೋ ಮಾಡೋದಾದರೆ ನಾನೇ ಮಾಡಬೇಕು ಅನ್ನೋದು ಅಮ್ಮನ ಕನಸಾಗಿತ್ತು. ನನ್ನ ಹೆಸರಲ್ಲೇ ಇರಬೇಕು ಅನ್ನೋ ಆಸೆಯಿತ್ತು. ಹೀಗಾಗಿ ಎರಡು ಪ್ರೊಡಕ್ಷನ್ ಹೌಸ್ ಇದ್ದರೂ ರಕ್ಷಿತಾ ಫಿಲ್ಮ್ ಫ್ಯಾಕ್ಟರಿ ಶುರು ಮಾಡಿದ್ದು.
ಚಿತ್ರಕ್ಕೆ ಪ್ರೇಮ್ ಹಣ ಹಾಕಿಲ್ಲ. ಪ್ರೇಮ್ ನಿರ್ದೇಶಕರಾಗಿ ಕೆಲಸ ಮಾಡಿದ್ದಾರೆ. ಅವನೊಬ್ಬ ಒಳ್ಳೆಯ ಡೈರೆಕ್ಟರ್. ಸಿನಿಮಾ ಚೆನ್ನಾಗಿ ಮಾಡಿದ್ದಾರೆ. ಇದೇ ಮೊದಲ ಬಾರಿಗೆ ಪ್ರೇಮ್ ಇಡೀ ಟೀಂಗೆ ಸಿನಿಮಾ ತೋರಿಸಿದ್ದಾರೆ. ಪ್ರೇಮ್ ಬಳಿ ಇರೋದು ಎಂತಹ ಟೀಂ ಎಂದರೆ ಇಷ್ಟವಾಗಲಿಲ್ಲ ಅನ್ನೋದನ್ನೂ ಅಷ್ಟೇ ಡೈರೆಕ್ಟ್ ಆಗಿ ಹೇಳಿದ್ದಾರೆ. ಅವರೆಲ್ಲರೂ ಮೆಚ್ಚಿದ್ದಾರೆ.
ನನಗೆ ಅಪ್ಪು ಸಿನಿಮಾ ನೆನಪಾಗುತ್ತೆ. ಅಪ್ಪು ರಿಲೀಸ್ ಆಗುವಾಗಲೇ ಅಪ್ಪು ಸ್ಟಾರ್ ನಟ. ಹೀರೋ ಆಗಿ ಮೊದಲ ಸಿನಿಮಾ ಆಗಿದ್ದರೂ ಅವರಾಗಲೇ ಸ್ಟಾರ್. ಇಡೀ ಟೀಂನಲ್ಲಿ ನಾನಷ್ಟೇ ಹೊಸಬಳು. ಹೀಗಾಗಿ ಟೆನ್ಷನ್ ಇತ್ತು. ಈಗ ಏಕ್ ಲವ್ ಯಾಗೆ ಕೂಡಾ ಅಂತದ್ದೇ ಟೆನ್ಷನ್ ಇದೆ.
ನಿರ್ಮಾಪಕಿಯಾಗಿದ್ದು ತಮ್ಮನಿಗಾಗಿ. ಏಕ್ ಲವ್ ಯಾ ಮುಗಿಸಿದರೆ ಸಾಕು ಎನಿಸಿತ್ತು. ಆದರೆ ಈಗ ಇನ್ನಷ್ಟು ಹೊಸ ಸಿನಿಮಾ ಮಾಡು ವ ಪ್ಲಾನ್ ಇದೆ. ಕೆಲವರ ಬಳಿ ಕಥೆ ಕೇಳಿದ್ದೇನೆ. ರಾಜ್ ಬಿ.ಶೆಟ್ಟಿ ಹಾಗೂ ಧನಂಜಯ್ ಚಿತ್ರಗಳು ಇಷ್ಟವಾಗುತ್ತಿವೆ. ರಾಜ್ ಬಿ.ಶೆಟ್ಟಿ ಬಳಿ ಈಗಾಗಲೇ ಕಥೆ ಕೇಳಿದ್ದೇನೆ. ಬೇರೆಯವರಿಗೂ ಸಿನಿಮಾ ಮಾಡುತ್ತೇನೆ ಎಂದಿದ್ದಾರೆ ರಕ್ಷಿತಾ ಪ್ರೇಮ್.