ನಮ್ಮದು ಜಗತ್ತಿನ ಅತ್ಯಂತ ದೊಡ್ಡ ದೇಶ. ನೂರಾ ಮೂವತ್ತು ಕೋಟಿ ಜನರ ಪರವಾಗಿ ಕೇಳುತ್ತಿದ್ದೇನೆ. ಕೆಜಿಎಫ್ ಚಾಪ್ಟರ್ 2 ಚಿತ್ರದ ಅಪ್‍ಡೇಟ್ ಮಾಹಿತಿಗಳನ್ನು ಕೊಡಿ.
ಇಂತಿ
ನರೇಂದ್ರ ಮೋದಿ
ಪ್ರಧಾನ ಮಂತ್ರಿ
ಹೀಗೊಂದು ಪತ್ರ ಹೊಂಬಾಳೆ ಪಿಕ್ಚರ್ಸ್‍ನವರಿಗೆ ಬಂದರೆ ಏನಾಗಬೇಡ. ಅಂತಾದ್ದೊಂದು ಪತ್ರ ಸೃಷ್ಟಿಸಿ ಹೊಂಬಾಳೆಯವರಿಗೆ ತಲೆನೋವು ತಂದಿಟ್ಟಿದ್ದಾನೊಬ್ಬ ಅಭಿಮಾನಿ. ಆತನ ಹೆಸರು ಚೇತನ್. ತಾನು ಇದನ್ನು ತಮಾಷೆಗಾಗಿ ಮಾಡಿದ್ದೇನೆ ಎಂದು ಆತ ಬರೆದುಕೊಂಡಿದ್ದನಾದರೂ, ಪ್ರಧಾನ ಮಂತ್ರಿ ಕಾರ್ಯಾಲಯ ಹಾಗೂ ಲೆಟರ್ ಹೆಡ್ ದುರುಪಯೋಗ ಪಡಿಸಿಕೊಂಡಿದ್ದಕ್ಕಾಗಿ ಆತನನ್ನು ಅರೆಸ್ಟ್ ಮಾಡಿ, ಎಚ್ಚರಿಕೆ ನೀಡಿ ಕಳಿಸಿದ್ದಾರೆ ಪೊಲೀಸರು.
ಏಪ್ರಿಲ್ 14ಕ್ಕೆ ಕೆಜಿಎಫ್ ಚಾಪ್ಟರ್ 2 ರಿಲೀಸ್ ಆಗುತ್ತಿದೆ. ಯಶ್, ಸಂಜಯ್ ದತ್, ರವೀನಾ ಟಂಡನ್, ಪ್ರಕಾಶ್ ರೈ, ಶ್ರೀನಿಧಿ ಶೆಟ್ಟಿ, ಮಾಳವಿಕಾ, ನಾಗಾಭರಣ, ವಸಿಷ್ಠ ಸಿಂಹ.. ಹೀಗೆ ಬೃಹತ್ ತಾರಾಗಣದ ಚಿತ್ರಕ್ಕೆ ಪ್ರಶಾಂತ್ ನೀಲ್ ನಿರ್ದೇಶಕ.