ಏಕ್ ಲವ್ ಯಾ ಚಿತ್ರದ ಎಲ್ಲ ಹಾಡುಗಳೂ ಗುನುಗುವಂತಿವೆ. ಒಂದಕ್ಕಿಂತ ಒಂದು ಹಿಟ್. ಪ್ರೇಮ್ ಮತ್ತು ಅರ್ಜುನ್ ಜನ್ಯ ಕಾಂಬಿನೇಷನ್ ಸೂಪರ್ ಹಿಟ್ ಆಗಿದೆ. ಹಾಗಾದರೆ ಏಕ್ ಲವ್ ಯಾ ಸಂಗೀತಕ್ಕೆ ಎಷ್ಟು ಕೋಟಿ ಬಂದಿರಬಹುದು? ಪ್ರೇಮ್ ಮತ್ತು ಜನ್ಯ ಕಾಂಬಿನೇಷನ್ ಇರೋ ಕಾರಣಕ್ಕೆ ದೊಡ್ಡ ಮಟ್ಟದ ಮೊತ್ತವೇ ಸಿಕ್ಕಿರಬಹುದು ಎಂಬ ನಿರೀಕ್ಷೆ ಇದೆಯೇ?
ಏಕ್ ಲವ್ ಯಾ ಚಿತ್ರದ ಆಡಿಯೋ ರೈಟ್ಸ್‍ನ್ನು ಎ2 ಮ್ಯೂಸಿಕ್ 75 ಲಕ್ಷಕ್ಕೆ ಕೊಂಡುಕೊಂಡಿದೆ. ಉಳಿದಂತೆ ಚಿತ್ರದ ಸ್ಯಾಟಲೈಟ್ ಮತ್ತು ಒಟಿಟಿ ರೈಟ್ಸ್‍ನ್ನು ಝೀ5 ಖರೀದಿಸಿದೆ.