ಕನ್ನೇರಿ ಚಿತ್ರದ ಇನ್ನೊಂದು ಹಾಡು ಜನಮೆಚ್ಚುಗೆ ಗಳಿಸಿದೆ. ಕಾಣದ ಊರಿಗೆ.. ಅನ್ನೋ ಹಾಡನ್ನು ಕಂಚಿನ ಕಂಠದಿಂದಲೇ ಕನ್ನಡಿಗರನ್ನು ಗೆದ್ದ ವಸಿಷ್ಠ ಸಿಂಹ ಬಿಡುಗಡೆ ಮಾಡಿದ್ದಾರೆ. ಕೋಟಗಾನಹಳ್ಳಿ ರಾಮಯ್ಯ ಅವರು ಬರೆದಿರೋ ಹಾಡಿದು. ಕನ್ನೇರಿ ಚಿತ್ರ ತಂಡ ಬಿಡುಗಡೆ ಮಾಡಿರೋ 2ನೇ ಹಾಡಿದು.
ಅಂದಹಾಗೆ ಇದು ಸತ್ಯಕಥೆ ಆಧರಿಸಿದ ಚಿತ್ರ. ಸರ್ಕಾರ ಬುಡಕಟ್ಟು ಜನರನ್ನು ಒಕ್ಕಲೆಬ್ಬಿಸಿದಾಗ ಹಲವರು ನಗರಕ್ಕೆ ಬಂದರು. ನಗರದ ಮನೆಗಳಲ್ಲಿ ಮನೆ ಕೆಲಸಕ್ಕೆ ಸೇರಿದರು. ಹಾಗೆ ಮನೆಗೆಲಸಕ್ಕೆ ಸೇರಿದ ಕನ್ನೇರಿ ಮೇಲೆ ಆ ಮನೆಯ ಮಾಲಕಿ ನಡೆಸಿದ ದೌರ್ಜನ್ಯ, ದೌರ್ಜನ್ಯಕ್ಕೊಳಗಾದರೂ ಆಕೆಯೇ ಜೈಲು ಸೇರುವುದು ಏಕೆ?
ಜೈಲಿನಿಂದ ಬಿಡುಗಡೆಯಾಗಲು ಆಕೆ ನಡೆಸುವ ಹೋರಾಟದ ಕಥೆ ಇಟ್ಟುಕೊಂಡು ಸಿನಿಮಾ ರೂಪಿಸಿದ್ದಾರೆ ನೀನಾಸಂ ಮಂಜು. ಪಿ.ಪಿ.ಹೆಬ್ಬಾರ್ ಮತ್ತು ಚಂದ್ರಶೇಖರ್ ಈ ಹೋರಾಟದ ಕಥೆಗೆ ಬಂಡವಾಳ ಹೂಡಿದ್ದಾರೆ. ಅರ್ಚನಾ ಮಧುಸೂದನ್, ಅರುಣ್ ಸಾಗರ್, ಅನಿತಾ ಭಟ್, ಕರಿಸುಬ್ಬು ಮೊದಲಾದವರು ನಟಿಸಿರುವ ಚಿತ್ರಕ್ಕೆ ಕಥೆ, ಸಂಭಾಷಣೆ ಕೋಟಗಾನಹಳ್ಳಿ ರಾಮಯ್ಯ ಅವರದ್ದು.