` ಬಾಲಕೃಷ್ಣ 107ನೇ ಸಿನಿಮಾ ಮಫ್ತಿ ರೀಮೇಕಾ..? - chitraloka.com | Kannada Movie News, Reviews | Image

User Rating: 0 / 5

Star inactiveStar inactiveStar inactiveStar inactiveStar inactive
 
ಬಾಲಕೃಷ್ಣ 107ನೇ ಸಿನಿಮಾ ಮಫ್ತಿ ರೀಮೇಕಾ..?
ಬಾಲಕೃಷ್ಣ 107ನೇ ಸಿನಿಮಾ ಮಫ್ತಿ ರೀಮೇಕಾ..?

ಮಫ್ತಿ. 2017ರಲ್ಲಿ ರಿಲೀಸ್ ಆಗಿ ಹಿಟ್ ಆಗಿದ್ದ ಸಿನಿಮಾ. ಜಯಣ್ಣ ನಿರ್ಮಾಣದ ಆ ಸಿನಿಮಾದಲ್ಲಿ ಭೈರತಿ ರಣಗಲ್ ಪಾತ್ರದಲ್ಲಿ ಮಿಂಚಿದ್ದವರು ಶಿವಣ್ಣ. ಕಪ್ಪು ಶರ್ಟ್ ಮತ್ತು ಲುಂಗಿಯಲ್ಲೇ ಇಡೀ ಚಿತ್ರದಲ್ಲಿ ಕಾಣಿಸಿಕೊಂಡಿದ್ದ ಶಿವಣ್ಣ, ಕಣ್ಣುಗಳಲ್ಲೇ ನಟಿಸಿ ಪ್ರೇಕ್ಷಕರಿಗೆ ಥ್ರಿಲ್ ಕೊಟ್ಟಿದ್ದರು. ನರ್ತನ್ ನಿರ್ದೇಶಿಸಿದ್ದ ಆ ಸಿನಿಮಾ ಈಗ ತೆಲುಗಿನಲ್ಲಿ ರೀಮೇಕ್ ಆಗುತ್ತಿದೆಯಾ?

ಹಾಗೊಂದು ಅನುಮಾನ ಬರೋಕೆ ಕಾರಣವಾಗಿದ್ದು ಲೀಕ್ ಆದ ಬಾಲಕೃಷ್ಣ ಅಭಿನಯದ 107ನೇ ಚಿತ್ರದ ಒಂದು ಸ್ಟಿಲ್. ಆ ಫೋಟೋದಲ್ಲಿ ಬಾಲಕೃಷ್ಣ ಸೇಮ್ ಮಫ್ತಿಯಲ್ಲಿ ಶಿವಣ್ಣ ಇದ್ದ ಗೆಟಪ್ಪಿನಲ್ಲೇ ಕುಳಿತಿದ್ದಾರೆ. ಅದೇ ಸೀಕ್ವೆನ್ಸ್. ಹೀಗಾಗಿ ಇದು ಮಫ್ತಿ ರೀಮೇಕ್ ಇರಬಹುದಾ ಎಂಬ ಸುದ್ದಿ ಹುಟ್ಟಿಕೊಂಡಿದೆ.

ಇದೇ ಚಿತ್ರದಲ್ಲಿ ಬಾಲಕೃಷ್ಣ ಜೊತೆ ದುನಿಯಾ ವಿಜಯ್ ನಟಿಸುತ್ತಿದ್ದು, ಅವರು ದೇವರಾಜ್ ನಿರ್ವಹಿಸುತ್ತಿದ್ದ ಪಾತ್ರ ಮಾಡುತ್ತಿರಬಹುದು ಎಂಬ ಸುದ್ದಿ ಇದೆ. ಶ್ರೀಮುರಳಿ ಪಾತ್ರಕ್ಕೆ ಯಾರಿರಬಹುದು ಎಂಬುದು ಊಹೆಯಷ್ಟೆ.. ಚಿತ್ರದಲ್ಲಿ ಶೃತಿ ಹಾಸನ್, ವರಲಕ್ಷ್ಮಿ ಶರತ್ ಕುಮಾರ್ ಮತ್ತು ಶ್ರೀಲೀಲಾ ನಟಿಸುತ್ತಿದ್ದು, ಕುತೂಹಲ ಇರುವುದಂತೂ ಸತ್ಯ. ಅದಕ್ಕೆ ಇನ್ನೂ ಒಂದು ಕಾರಣ ಇದೆ.

ಈ ಚಿತ್ರದ ಡೈರೆಕ್ಟರ್ ಗೋಪಿಚಂದ್ ಮಲ್ಲಿನೇನಿ. ಈ ಹಿಂದೆ ಅವರು ಕ್ರ್ಯಾಕ್ ಚಿತ್ರವನ್ನು ನಿರ್ದೇಶಿಸಿದ್ದು. ಅದು ವಿಜಯ್ ಸೇತುಪತಿ ನಟಿಸಿದ್ದ  ಸೇತುಪತಿ ಚಿತ್ರದ ಅಲ್ಪ ಸ್ವಲ್ಪ ಬದಲಾವಣೆಯ ಸಿನಿಮಾ ಎಂಬ ಆರೋಪ ಕೇಳಿ ಬಂದಿತ್ತು. ಹೀಗಾಗಿ ಇದು ಮಫ್ತಿ ರೀಮೇಕ್ ಇರಬಹುದು ಎಂಬ ವಾದಕ್ಕೆ ಪುಷ್ಟಿ ಕೊಟ್ಟಿದೆ.