` ವಿದ್ಯಾಸಾಗರ್.. ರಾಜೇಶ್.. ಕಲಾತಪಸ್ವಿ.. ರಾಜೇಶ್ ಸ್ವಾರಸ್ಯಗಳು - chitraloka.com | Kannada Movie News, Reviews | Image

User Rating: 0 / 5

Star inactiveStar inactiveStar inactiveStar inactiveStar inactive
 
ವಿದ್ಯಾಸಾಗರ್.. ರಾಜೇಶ್.. ಕಲಾತಪಸ್ವಿ.. ರಾಜೇಶ್ ಸ್ವಾರಸ್ಯಗಳು
Actor Rajesh

ರವಿವರ್ಮನಾ ಕುಂಚದಾ ಕಲೆ ಬಲೆ ಸಾಕಾರವೋ..

ದೇವರ ದುಡ್ಡು ಚಿತ್ರದ ನಾನೂ ಎಂಬ ಭಾವ ನಾಶವಾಯಿತು..

ಬೆಳುವಲದ ಮಡಿಲಲ್ಲಿ.. ಬೆವರ ಹನಿ ಬಿದ್ದಾಗ..

ಕಂಗಳು ವಂದನೆ ಹೇಳಿದೆ.. ಹೃದಯದ ದುಂಬಿ ಹಾಡಿದೆ..

ಹೋಗದಿರಿ ಸೋದರರೇ.. ಹೋಗದಿರಿ ಬಂಧುಗಳೇ..

ಎಂದೆಂದೂ ನೀ ಹೀಗೆ ನಗಬೇಕು.. ಸ್ವರ್ಗ ನಾಚುತ್ತಾ ಕಾಲಡಿ ಬರಬೇಕು..

ಈ ದೇಶ ಚೆನ್ನ.. ಈ ಭೂಮಿ ಚೆನ್ನ..

ಹೀಗೆ ರಾಜೇಶ್ ಅವರು ಕನ್ನಡ ಚಿತ್ರರಂಗಕ್ಕೆ ಕೊಟ್ಟ ಇಂಪಾದ ಹಾಡುಗಳ ಸಂಖ್ಯೆ ದೊಡ್ಡದು. ನಟನೆಗೊಂದು ಶಿಸ್ತು, ಗಾಂಭೀರ್ಯ ತಂದವರು ರಾಜೇಶ್. ನಟಿಸಿದ್ದ ಚಿತ್ರಗಳಲ್ಲಿನ ಪಾತ್ರಗಳೂ ಅಂಥವೇ.

ಪಿಡಬ್ಲ್ಯೂಡಿಯಲ್ಲಿ ಟೈಪಿಸ್ಟ್ ಆಗಿ ಕೆಲಸ ಮಾಡುತ್ತಿದ್ದಾಗ ಫೈಲುಗಳ ಮಧ್ಯೆ ಮುಚ್ಚಿಟ್ಟುಕೊಂಡು ಕಾದಂಬರಿ ಓದುವ ಗೀಳು ಅಂಟಿಕೊಂಡಿತ್ತು. ಇದು ಮೇಲಧಿಕಾರಿಗಳಿಗೆ ಗೊತ್ತಾದಾಗ ಸರ್ಕಾರಿ ನೌಕರಿ ಬಿಟ್ಟು ನಟನೆಗೆ ಬರಬೇಕಾಯಿತು. ಅಂದಹಾಗೆ ಚಿ.ಉದಯಶಂಕರ್ ಕೂಡಾ ಇದೇ ಕಾರಣಕ್ಕೆ ಸರ್ಕಾರಿ ನೌಕರಿ ಬಿಟ್ಟು ಗೆದ್ದವರು ಎನ್ನುವುದು ಕಾಕತಾಳೀಯ.

ಅಪ್ಪ-ಅಮ್ಮಂದಿರಿಗೂ ಗೊತ್ತಿಲ್ಲದೆ ನಾಟಕಗಳಲ್ಲಿ ನಟಿಸುತ್ತಿದ್ದ ರಾಜೇಶ್ ಅಲಿಲ ಇಟ್ಟುಕೊಂಡಿದ್ದ ಹೆಸರು ವಿದ್ಯಾಸಾಗರ್. ಶಕ್ತಿ ನಾಟಕ ಮಂಡಳಿ ಅವರೇ ಕಟ್ಟಿದ್ದ ಡ್ರಾಮಾ ಕಂಪೆನಿ. ನಟನಾಗಿ ಚಿತ್ರರಂಗಕ್ಕೆ ಬಂದಿದ್ದು ವೀರಸಂಕಲ್ಪ ಚಿತ್ರದಿಂದ.

ದೇವರ ದುಡ್ಡು, ನಮ್ಮ ಊರು, ಸೊಸೆ ತಂದ ಸೌಭಾಗ್ಯ, ಬೆಳವಲದ ಮಡಿಲಲ್ಲಿ, ದೇವರ ಗುಡಿ, ದೇವರ ಮಕ್ಕಳು.. ಹೀಗೆ ನಟಿಸಿದ ಚಿತ್ರಗಳ ಸಂಖ್ಯೆ 150ಕ್ಕೂ ಹೆಚ್ಚು. ಹೀರೋ ಆಗಿದ್ದಾಗಲೇ ಹೀರೋನ ಅಣ್ಣ, ತಮ್ಮ, ನಾಯಕಿಯ ಅಣ್ಣನಂತಾ ಪಾತ್ರಗಳಲ್ಲಿ ನಟಿಸಿದರು. ಗೆದ್ದರು ಕೂಡಾ..

ಚಿತ್ರ ನಿರ್ದೇಶಕ ಮಣಿರತ್ನಂ ಅವರ ತಂದೆ ರತ್ನಂ ಅಯ್ಯರ್ ಅವರನ್ನು ತಮ್ಮ ಗಾಡ್‍ಫಾದರ್ ಎಂದು ಗೌರವಿಸುತ್ತಿದ್ದರು ರಾಜೇಶ್.

ರೇಣುಕಾದೇವಿ ಚಿತ್ರದ ಜಮದಗ್ನಿ, ಕಲಿಯುಗ ಚಿತ್ರದ ಸ್ವಾಭಿಮಾನಿ ಅಪ್ಪ ಭವಾನಿ ಶಂಕರ್, ಜಯಭೇರಿ ಚಿತ್ರದ ಖಳನಾಯಕ ರಾಜಾರಾಂ, ದೇವರ ದುಡ್ಡು ಚಿತ್ರದ ಪರಮ ನಾಸ್ತಿಕ, ಆನಂದ್, ಕರ್ಣ ಚಿತ್ರಗಳ ಗಂಭೀರ ಪಾತ್ರಾಭಿನಯ.. ಹೀಗೆ ರಾಜೇಶ್ ಸಿಕ್ಕ ಪ್ರತೀ ಪಾತ್ರಕ್ಕೂ ಜೀವ ತುಂಬುತ್ತಿದ್ದ ನಟ. ಹೊನ್ನಪ್ಪ ಭಾಗವತರ್, ಡಾ.ರಾಜ್, ಪಂತುಲು, ಉದಯ್ ಕುಮಾರ್, ಬಿ.ಸರೋಜಾದೇವಿ.. ಕಾಲದ ಕಲಾವಿದ. ಒಂದು ತುಂಬು ಜೀವನ ಹೀಗೆ ಅಂತ್ಯವಾಗಿದೆ. ಕಲಾತಪಸ್ವಿಯ ಕಲೆಯ ತಪಸ್ಸು ಮುಗಿದಿದೆ.