ಕೆಜಿಎಫ್ ಚಾಪ್ಟರ್ 2 ಬಿಡುಗಡೆ ಹತ್ತಿರ ಬರುತ್ತಿದೆ. ಏಪ್ರಿಲ್ 14ಕ್ಕೆ ರಿಲೀಸ್. ಈ ನಡುವೆ ಚಿತ್ರದ ಶೂಟಿಂಗ್ ಇನ್ನೂ ಮುಗಿದಿಲ್ವಾ ಅನ್ನೋ ಪ್ರಶ್ನೆ ಉದ್ಭವವಾಗಿದೆ. ಮೂಲಗಳ ಪ್ರಕಾರ ಚಿತ್ರದ ಇಂಟ್ರೊಡಕ್ಷನ್ ಸಾಂಗ್ ನಿರ್ದೇಶಕ ಪ್ರಶಾಂತ್ ನೀಲ್ ಅವರಿಗೆ ತೃಪ್ತಿ ತಂದಿಲ್ಲ.
ಹೀಗಾಗಿ ಮತ್ತೊಮ್ಮೆ ಚಿತ್ರೀಕರಣಕ್ಕೆ ಮನಸ್ಸು ಮಾಡಿದ್ದಾರೆ ಎಂಬ ಸುದ್ದಿ ಇದೆ. ಪ್ರಶಾಂತ್ ನೀಲ್ ಇರೋದೇ ಹಾಗೆ.. ಉಗ್ರಂ ಚಿತ್ರದ ಚಿತ್ರೀಕರಣ ಮುಗಿದ ಮೇಲೆ ತೃಪ್ತಿಯಾಗದೆ ಇಡೀ ಸಿನಿಮಾವನ್ನು ಮತ್ತೊಮ್ಮೆ ಶೂಟ್ ಮಾಡಿದ್ದರು. ಗೆದ್ದಿದ್ದರೂ ಕೂಡಾ. ಕೆಜಿಎಫ್ ಚಾಪ್ಟರ್ 1ನಲ್ಲೂ ಅಷ್ಟೆ, ಚಿತ್ರದ ರಿಲೀಸ್ ಹತ್ತಿರ ಬಂದಾಗ ಹಿಂದಿ ವರ್ಷನ್‍ಗಾಗಿ ಮೌನಿ ರಾಯ್ ಅವರನ್ನು ಹಾಕಿಕೊಂಡು ಶೂಟ್ ಮಾಡಲಾಗಿತ್ತು. ಕೆಜಿಎಫ್ ಚಾಪ್ಟರ್ 2 ಕೂಡಾ ಇದೇ ಹಾದಿಯಲ್ಲಿದೆ.
ಇನ್ನು ಚಿತ್ರದ ಡಬ್ಬಿಂಗ್‍ಗೆ ಸುಧಾರಾಣಿ ಮತ್ತು ಶೃತಿ ಎಂಟ್ರಿ ಕೊಟ್ಟಿದ್ದಾರೆ. ಕನ್ನಡದಲ್ಲಿ ರವೀನಾ ಟಂಡನ್ ಪಾತ್ರಕ್ಕೆ ಸುಧಾರಾಣಿ ಮತ್ತು ಈಶ್ವರಿ ರಾವ್ ಪಾತ್ರಕ್ಕೆ ಶೃತಿ ಡಬ್ಬಿಂಗ್ ಮಾಡುತ್ತಿದ್ದಾರೆ.