ಹೆಚ್ಚೂ ಕಡಿಮೆ ಮೂರು ತಿಂಗಳು. ಅಪ್ಪು ಮನೆಗೆ ಬಂದು ಹೋಗುವವರ ಸಂಖ್ಯೆ ಹಾಗೆಯೇ ಇದೆ. ಈಗ ಅರ್ಜುನ್ ಸರ್ಜಾ ತಮ್ಮ ಪತ್ನಿ ಆಶಾರಾಣಿ ಅವರೊಂದಿಗೆ ಅಪ್ಪು ಮನೆಗೆ ಭೇಟಿ ಕೊಟ್ಟಿದ್ದಾರೆ. ವಿಶೇಷವೆಂದರೆ ಅಪ್ಪು ಮತ್ತು ಆಶಾರಾಣಿ ಬಾಲ್ಯಕಾಲದ ಸ್ನೇಹಿತರು. ಒಟ್ಟಿಗೇ ಬೆಳೆದವರು.
ಅಪ್ಪು ನಿಧನರಾದಾಗ ಆಶಾಗೆ ಬರೋಕೆ ಆಗಲಿಲ್ಲ. ಅವರಿಬ್ಬರೂ ಬಾಲ್ಯ ಸ್ನೇಹಿತರು. ಹೀಗಾಗಿ ಈಗ ಅವರನ್ನು ನೋಡಿಕೊಂಡು ಹೋಗೋಣ ಎಂದು ಇಬ್ಬರೂ ಬಂದೆವು. ಅಪ್ಪು ಬಗ್ಗೆ ಏನು ಹೇಳೋದು. ಎಷ್ಟು ನೆನಪಿಸಿಕೊಂಡರೂ ಕಡಿಮೆನೇ. ಅವರ ಕುಟುಂಬದ ಕಷ್ಟದಲ್ಲಿ ನಾವಿದ್ದೇವೆ. ಇರುತ್ತೇವೆ ಅನ್ನೋ ಒಂದು ಮಾತು ಹೇಳಬೇಕಿತ್ತು. ಬಂದಿದ್ದೆವು ಅಷ್ಟೆ ಎಂದಿದ್ದಾರೆ ಅರ್ಜುನ್ ಸರ್ಜಾ.