ಯಶ್ ಅಭಿನಯದ ಕೆಜಿಎಫ್ ಚಾಪ್ಟರ್ 2 ರಿಲೀಸ್ ಡೇಟ್ ಘೋಷಣೆಯಾಗಿದ್ದು 2021ರಲ್ಲಿ. ಏಪ್ರಿಲ್ 14ಕ್ಕೆ ರಿಲೀಸ್ ಆಗುತ್ತಿರೋ ಚಿತ್ರ, 2022ರ ಸೆನ್ಸೇಷನಲ್ ಸಿನಿಮಾಗಳಲ್ಲಿ ನಂಬರ್ 1 ಸ್ಥಾನದಲ್ಲಿದೆ. ಈ ಚಿತ್ರಕ್ಕೆ ಮೊದಲು ಎದುರಾಗಿದ್ದದ್ದು ಅಮೀರ್ ಖಾನ್ ಅಭಿನಯದ ಲಾಲ್ ಸಿಂಗ್ ಚಡ್ಡಾ.
ಏಪ್ರಿಲ್ 14ರಂದೇ ಸಿಖ್ಖರ ಪವಿತ್ರ ದಿನವಿದ್ದು, ಅದೇ ದಿನ ಸಿನಿಮಾ ರಿಲೀಸ್ ಮಾಡುತ್ತೇವೆ. ವಿಜಯ್ ಕಿರಗಂದೂರು ಮತ್ತು ಯಶ್ ಜೊತೆ ಮಾತನಾಡಿದ್ದೇವೆ ಎಂದೆಲ್ಲ ಹೇಳಿದ್ದರು ಅಮೀರ್ ಖಾನ್. ಈಗ ಲಾಲ್ ಸಿಂಗ್ ಚಡ್ಡಾ ಮುಂದಕ್ಕೆ ಹೋಗಿದೆ. ದಿಢೀರನೆ ತಮ್ಮ ರಿಲೀಸ್ ಡೇಟ್ ಬದಲಿಸಿ ಆಗಸ್ಟ್‍ಗೆ ಹೋಗಿದ್ದಾರೆ. ಹಾಗಂತ ಕೆಜಿಎಫ್ ಚಾಪ್ಟರ್ 2 ಏಕಾಂಗಿಯಾಗಿಯೇನೂ ಬರುತ್ತಿಲ್ಲ. ಹೊಸ ಚಾಲೆಂಜ್ ಸಿದ್ಧವಾಗಿದೆ.
ಏಪ್ರಿಲ್ 14ರಂದು ಶಾಹಿದ್ ಕಪೂರ್ ಅಭಿನಯದ ಜೆರ್ಸಿ ರಿಲೀಸ್ ಆಗುತ್ತಿದೆ. ಲಾಲ್ ಸಿಂಗ್ ಚಡ್ಡಾ ಹಿಂದೆ ಸರಿದ ಬೆನ್ನಲ್ಲೇ ಜೆರ್ಸಿ ರಿಲೀಸ್ ಡೇಟ್ ಘೋಷಿಸಿದೆ. ಹಾಗಂತ ಜೆರ್ಸಿಯೇನೂ ವೊರಿಜಿನಲ್ ಸಿನಿಮಾ ಅಲ್ಲ. ತೆಲುಗಿನ ಜೆರ್ಸಿ ಚಿತ್ರದ ಯಥಾವತ್ ರೀಮೇಕ್.
ಸದ್ಯಕ್ಕೆ ಕೆಜಿಎಫ್ ಚಾಪ್ಟರ್ 2 ಎದುರು ಬರುವ ಧೈರ್ಯ ಸಣ್ಣ ಬಜೆಟ್ ಚಿತ್ರಗಳಿಗೂ ಇಲ್ಲ. ದೊಡ್ಡ ಬಜೆಟ್ ಚಿತ್ರಗಳಿಗೂ ಇಲ್ಲ. ಅದು ಕೆಜಿಎಫ್ ಚಾಪ್ಟರ್ 2 ಸೃಷ್ಟಿಸಿರುವ ಸಂಚಲನ.