` ರಿಷಬ್ ಶೆಟ್ಟರ ಕಾಂತಾರ ಶೂಟಿಂಗ್ ಎಲ್ಲಿಗೆ ಬಂತು? - chitraloka.com | Kannada Movie News, Reviews | Image

User Rating: 0 / 5

Star inactiveStar inactiveStar inactiveStar inactiveStar inactive
 
ರಿಷಬ್ ಶೆಟ್ಟರ ಕಾಂತಾರ ಶೂಟಿಂಗ್ ಎಲ್ಲಿಗೆ ಬಂತು?
Kantara

ರಿಷಬ್ ಶೆಟ್ಟಿ ಮತ್ತು ಹೊಂಬಾಳೆ ಮೊದಲ ಬಾರಿಗೆ ಜೊತೆಯಾಗಿರುವ ಕಾಂತಾರ ಸಿನಿಮಾ ಚಿತ್ರೀಕರಣ ಶುರುವಾಗಿ ಹೆಚ್ಚೂ ಕಡಿಮೆ ಎರಡು ತಿಂಗಳಾಗಿದೆ. ಕುಂದಾಪುರದಲ್ಲೇ ಬೀಡು ಬಿಟ್ಟಿರೋ ಚಿತ್ರತಂಡ ನಿರಂತರವಾಗಿ ಚಿತ್ರೀಕರಣದಲ್ಲಿದೆ. ಎಲ್ಲಿಗೆ ಬಂದಿದೆ ಸಿನಿಮಾ?

ಇದುವರೆಗೆ 65 ದಿನಗಳ ಶೂಟಿಂಗ್ ಆಗಿದೆ. ಇನ್ನೂ 25 ದಿನಗಳ ಶೂಟಿಂಗ್ ಬಾಕಿ ಇದೆ. ಮಾರ್ಚ್ ಹೊತ್ತಿಗೆ ಚಿತ್ರೀಕರಣ 100% ಮುಗಿಯಲಿದೆ. ಇದು 90ರ ದಶಕದ ಕಥೆ. ಹೀಗಾಗಿ ಕುಂದಾಪುರದ ಬಳಿಯೇ ಸೆಟ್ ಹಾಕಿದ್ದೇವೆ. ಅದಕ್ಕಾಗಿ ಒಂದು ನಿಗೂಢ ಎನ್ನಿಸುವ ಕಾಡನ್ನೂ ಸೃಷ್ಟಿಸಿದ್ದೇವೆ. ಕಂಬಳದ ಶೂಟಿಂಗ್ ಮುಗಿದಿದೆ.. ಹೀಗೆ ಒಂದೇ ಉಸುರಿಗೆ ಎಲ್ಲ ಮಾಹಿತಿ ಇಡುತ್ತಾರೆ ರಿಷಬ್ ಶೆಟ್ಟಿ.

ಪ್ರಕೃತಿ ಮತ್ತು ಮನುಷ್ಯನ ನಡುವಿನ ಯುದ್ಧದ ಕಥೆ ಇದು. ರಿಷಬ್ ಎದುರು ಸಪ್ತಮಿ ಗೌಡ ನಾಯಕಿಯಾಗಿದ್ದರೆ, ಕಿಶೋರ್, ಅಚ್ಯುತ್, ಪ್ರಮೋದ್ ಶೆಟ್ಟಿ, ಪ್ರಕಾಶ್ ತುಮ್ಮಿನಾಡ್ ಮೊದಲಾದವರು ನಟಿಸಿದ್ದಾರೆ. ಅಂದಹಾಗೆ ಈ ಚಿತ್ರದ ಸ್ಟಂಟ್ಸ್, ಆ್ಯಕ್ಷನ್ ದೃಶ್ಯಗಳಲ್ಲಿ ಬಾಡಿ ಡಬಲ್ ಇಲ್ಲದೇ ಚಿತ್ರೀಕರಿಸಿದ್ದಾರಂತೆ ರಿಷಬ್ ಶೆಟ್ಟಿ. ನಿರ್ದೇಶಕರು ಹೇಳಿದ್ದನ್ನು ಹೀರೋ ರಿಷಬ್ ಶೆಟ್ಟಿ ಮರುಮಾತನಾಡದೆ ಒಪ್ಪಿಕೊಂಡು ನಟಿಸಿದ್ದಾರಂತೆ.