` ಮಳ್ಳಿ ಮಳ್ಳಿ.. ಜವಾರಿ ಸಾಹಿತ್ಯದ ಮೇಲೆ ರಾಣಾ-ಸಂಯುಕ್ತಾ ಸವಾರಿ - chitraloka.com | Kannada Movie News, Reviews | Image

User Rating: 0 / 5

Star inactiveStar inactiveStar inactiveStar inactiveStar inactive
 
ಮಳ್ಳಿ ಮಳ್ಳಿ.. ಜವಾರಿ ಸಾಹಿತ್ಯದ ಮೇಲೆ ರಾಣಾ-ಸಂಯುಕ್ತಾ ಸವಾರಿ
ಮಳ್ಳಿ ಮಳ್ಳಿ.. ಜವಾರಿ ಸಾಹಿತ್ಯದ ಮೇಲೆ ರಾಣಾ-ಸಂಯುಕ್ತಾ ಸವಾರಿ

ಕನ್ನಡದಲ್ಲಿ ಉತ್ತರ ಕರ್ನಾಟಕದ ಸೊಗಡನ್ನು ಯಶಸ್ವಿಯಾಗಿ ಬಳಸಿಕೊಂಡಿರುವವರು ಬಹಳ ಅಪರೂಪ. ಹಾಗೆ ಪ್ರಯೋಗ ಮಾಡಿ ಪ್ರಯತ್ನ ಮಾಡಿದಾಗಲೆಲ್ಲ ಗೆಲುವು ಸಿಕ್ಕಿದೆ. ಈ ಬಾರಿ ಗೆದ್ದಿರೋದು ರಾಣಾ.

ನಂದಕಿಶೋರ್ ನಿರ್ದೇಶನದ ರಾಣಾ ಚಿತ್ರದ ಮಳ್ಳಿ ಮಳ್ಳಿ ಹಾಡು ಹೊರಬಿದ್ದಿದೆ. ಚಂದನ್ ಶೆಟ್ಟಿ ಬೀಟ್ಸ್‍ಗೆ ಬೊಂಬಾಟ್ ಸ್ಟೆಪ್ಸ್ ಹಾಕಿರೋದು ಶ್ರೇಯಸ್ ಮಂಜು ಮತ್ತು ಸಂಯುಕ್ತಾ ಹೆಗಡೆ. ಉತ್ತರ ಕರ್ನಾಟಕದ ಸಾಹಿತ್ಯಕ್ಕೆ ತಕ್ಕಂತೆ ಹೆಜ್ಜೆ ಹಾಕಿ ಲಗ್ಗೆಯಿಟ್ಟಿದೆ ಶ್ರೇಯಸ್-ಸಂಯುಕ್ತಾ ಜೋಡಿ.

ಚುಟು ಚುಟು ಖ್ಯಾತಿಯ ಶಿವು ಬೆರ್ಗಿ ಬರೆದಿರೋ ಹಾಡನ್ನು ಅಷ್ಟೇ ಖಡಕ್ಕಾಗಿ ಹಾಡಿರೋದು ಚಂದನ್ ಶೆಟ್ಟಿ ಮತ್ತು ದಿವ್ಯಾ ರಾಮಚಂದ್ರ. ಗುಜ್ಜಲ್ ಪುರುಷೋತ್ತಮ್ ನಿರ್ಮಾಣದ ಚಿತ್ರದಲ್ಲಿ ಸಂಯುಕ್ತಾ ಹೆಗಡೆ ನಾಯಕಿ ಅಲ್ಲ. ಈ ಸ್ಪೆಷಲ್ ಹಾಡಿಗೆ ಕುಣಿದಿದ್ದಾರೆ ಅಷ್ಟೆ. ಚಿತ್ರದ ನಾಯಕಿ ಏಕ್ ಲವ್ ಯಾ ರಿಲೀಸ್‍ಗೆ ಕಾಯ್ತಿರೋ ರೀಷ್ಮಾ ನಾಣಯ್ಯ.