` ಯಶ್`ರಿಂದ ಉಡುಪಿಯ ಕೃಷ್ಣ, ಕಟೀಲು ದುರ್ಗಾಪರಮೇಶ್ವರಿ ದರ್ಶನ - chitraloka.com | Kannada Movie News, Reviews | Image

User Rating: 0 / 5

Star inactiveStar inactiveStar inactiveStar inactiveStar inactive
 
ಯಶ್`ರಿಂದ ಉಡುಪಿಯ ಕೃಷ್ಣ, ಕಟೀಲು ದುರ್ಗಾಪರಮೇಶ್ವರಿ ದರ್ಶನ
ಯಶ್`ರಿಂದ ಉಡುಪಿಯ ಕೃಷ್ಣ, ಕಟೀಲು ದುರ್ಗಾಪರಮೇಶ್ವರಿ ದರ್ಶನ

ನಟ ಯಶ್ ಹಾಗೂ ನಿರ್ಮಾಪಕ ವಿಜಯ್ ಕಿರಗಂದೂರು ಅವರ ದೇಗುಲ ದರ್ಶನ ಮುಂದುವರೆದಿದೆ. ಇಬ್ಬರೂ ಕಟೀಲು ದುರ್ಗಾಪರಮೇಶ್ವರಿ ಹಾಗೂ ಉಡುಪಿಯ ಶ್ರೀಕೃಷ್ಣ ದರ್ಶನ ಪಡೆದಿದ್ದಾರೆ.

ಯಶ್ ಮತ್ತು ವಿಜಯ್ ಕಿರಗಂದೂರು ಕಾಂಬಿನೇಷನ್`ನ ಕೆಜಿಎಫ್ ಚಾಪ್ಟರ್ 2 ಬಿಡುಗಡೆಗೆ ಸಿದ್ಧವಾಗಿದೆ. ಏಪ್ರಿಲ್ 14ರಂದು ಸಿನಿಮಾ ರಿಲೀಸ್ ಆಗಲಿದ್ದು, ಬಿಡುಗಡೆಗೆ ಮುನ್ನ ದೇವರ ಆಶೀರ್ವಾದ ಪಡೆಯುವುದು ವಿಜಯ್ ಅವರ ಪದ್ಧತಿ. ಆ ಪದ್ಧತಿಯೇ ಇಡೀ ಚಿತ್ರತಂಡ ದೇಗುಲ ಯಾತ್ರೆ ಕೈಗೊಳ್ಳುತ್ತದೆ. ಇದಿನ್ನೂ ಆರಂಭ.. ದೇಗುಲ ಯಾತ್ರೆ ಮುಗಿಸಿದ ನಂತರವೇ ಚಿತ್ರದ ಪ್ರಚಾರ ಆರಂಭಿಸಲಿದೆ ಕೆಜಿಎಫ್ ಟೀಂ.