` ಸಂದೇಶ್ ನಾಗರಾಜ್ ಜೊತೆ ಶಿವಣ್ಣ ಸಿನಿಮಾ..! - chitraloka.com | Kannada Movie News, Reviews | Image

User Rating: 0 / 5

Star inactiveStar inactiveStar inactiveStar inactiveStar inactive
 
ಸಂದೇಶ್ ನಾಗರಾಜ್ ಜೊತೆ ಶಿವಣ್ಣ ಸಿನಿಮಾ..!
Shivarajkumar, Sandesh Nagaraj

ಸಂದೇಶ್ ನಾಗರಾಜ್ ನಿರ್ಮಾಣದ ಚಿತ್ರಕ್ಕೆ ಶಿವಣ್ಣ ಓಕೆ ಎಂದಿದ್ದಾರೆ. ಸದಾ ಬ್ಯುಸಿಯಾಗಿರುವ ಶಿವಣ್ಣ ಕೈಲಿ ಈಗಾಗಲೇ ನಾಲ್ಕೈದು ಚಿತ್ರಗಳಿವೆ. ಭೈರಾಗಿ, ನೀ ಸಿಗೋವರೆಗೂ ಮತ್ತು ವೇದ ಚಿತ್ರಗಳು ಪ್ರೊಡಕ್ಷನ್‍ನಲ್ಲಿವೆ. ಆರ್.ಜೈ ಚಿತ್ರಕ್ಕೆ ಇತ್ತೀಚೆಗಷ್ಟೇ ಗ್ರೀನ್ ಸಿಗ್ನಲ್ ಕೊಟ್ಟಿದ್ದಾರೆ. ಇದರ ಜೊತೆಯಲ್ಲೇ ಸಂದೇಶ್ ನಾಗರಾಜ್ ಚಿತ್ರಕ್ಕೆ ಎಸ್ ಎಂದಿದ್ದಾರೆ ಶಿವಣ್ಣ.

ಅಂದಹಾಗೆ ಹೊಸ ಚಿತ್ರಕ್ಕೆ ನಿರ್ದೇಶಕರಾಗಿರೋದು ಚಿ.ಗುರುದತ್. ಈ ಹಿಂದೆ ಶಿವಣ್ಣ ನಾಯಕತ್ವದಲ್ಲಿಯೇ ಸಮರ ಮತ್ತು ಆರ್ಯನ್ ಚಿತ್ರಗಳನ್ನು ಡೈರೆಕ್ಟ್ ಮಾಡಿದ್ದ ಗುರುದತ್, ದತ್ತ, ಕಾಮಣ್ಣನ ಮಕ್ಕಳು ಹಾಗೂ ಕಿಚ್ಚ ಹುಚ್ಚ ಚಿತ್ರಗಳನ್ನು ನಿರ್ದೇಶಿಸಿದ್ದಾರೆ. ಗೆಳೆಯನಿಗಾಗಿ ಹೊಸ ಕಥೆಯೊಂದನ್ನು ಸಿದ್ಧಪಡಿಸಿದ್ದಾರಂತೆ ಗುರುದತ್. ಮಾರ್ಚ್‍ನಲ್ಲಿ ಚಿತ್ರ ಸೆಟ್ಟೇರುವ ಸಾಧ್ಯತೆ ಇದೆ.