ಕನ್ನಡ ಚಿತ್ರರಂಗದ ಹಿರಿಯ ನಟ ಅಶೋಕ್ ರಾವ್ ವಿಧಿವಶರಾಗಿದ್ದಾರೆ. ಕ್ಯಾನ್ಸರ್ಗೆ ತುತ್ತಾಗಿದ್ದ ಅಶೋಕ್ ರಾವ್ ನಿರಂತರ ಚಿಕಿತ್ಸೆ ಪಡೆಯುತ್ತಿದ್ದರು. ವಿದ್ಯಾರಣ್ಯ ಪುರದಲ್ಲಿರುವ ನಿವಾಸದಲ್ಲಿ ಮಧ್ಯರಾತ್ರಿ 12.30ಕ್ಕೆ ಅಶೋಕ್ ರಾವ್ ನಿಧನರಾಗಿದ್ದಾರೆ.
ನಟ ಅಶೋಕ್ ರಾವ್ ಪತ್ನಿ, ಮಗ ಹಾಗೂ ಸೊಸೆಯನ್ನು ಅಗಲಿದ್ದಾರೆ. ಖಳನಟನ ಪಾತ್ರಗಳಲ್ಲಿ ಹೆಚ್ಚುಗುರುತಿಸಿಕೊಂಡಿದ್ದ ಅಶೋಕ್ ರಾವ್, ಘರ್ಜಿಸುವ ಗಹಗಹಿಸುವ ಖಳನಟರ ವೈಖರಿ ಬದಲಿಸಿದ್ದವರಲ್ಲಿ ಒಬ್ಬರು. ಸ್ಫುರದ್ರೂಪಿ ಖಳನಟ. ಪರಶುರಾಮ್, ಅಂತರಾಳ, ಅಶೋಕ ಚಕ್ರ, ಕೊಲ್ಲೂರು ಕಾಳ, ಝೇಂಕಾರ, ಜೋಡಿ ಹಕ್ಕಿ, ರಾಜಕೀಯ, ಸಾಂಗ್ಲಿಯಾನ, ಸೇರಿದಂತೆ ನೂರಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿಸಿದ್ದಾರೆ. 2016ರಲ್ಲಿ ರಿಲೀಸ್ ಆದ ಸಿಕ್ಕಾಪಟ್ಟೆ ಇಷ್ಟಪಟ್ಟೆ ಅಶೋಕ್ ರಾವ್ ಅಭಿನಯದ ಕೊನೆಯ ಚಿತ್ರ.
ಡಾ.ರಾಜ್, ವಿಷ್ಣು, ಅಂಬಿ, ಪ್ರಭಾಕರ್, ಶಿವರಾಜ್ ಕುಮಾರ್, ರಾಘವೇಂದ್ರ ರಾಜ್ ಕುಮಾರ್, ಶಂಕರ್ ನಾಗ್, ಕುಮಾರ್ ಬಂಗಾರಪ್ಪ, ದೇವರಾಜ್, ಶಶಿಕುಮಾರ್, ಮಾಲಾಶ್ರೀ, ಥ್ರಿಲ್ಲರ್ ಮಂಜು.. ಹೀಗೆ ಹಲವರ ಚಿತ್ರಗಳಲ್ಲಿ ಖಳನಟರಾಗಿ ಮಿಂಚಿದ್ದರು.