ಚಿತ್ರದ ಹೆಸರು ಸೋಮು ಸೌಂಡ್ ಇಂಜಿನಿಯರ್. ನಿರ್ದೇಶಕರ ಹೆಸರು ಅಭಿ. ಉತ್ತರ ಕರ್ನಾಟಕದ ಹುಡುಗ. ಓದಿದ್ದು ಡಿಎಡ್. ಮೇಷ್ಟರಾಗಬೇಕಿದ್ದ ಹುಡುಗ ಈಗ ಡೈರೆಕ್ಟರ್. ಸುಮಾರು 10 ವರ್ಷ ದುನಿಯಾ ಸೂರಿ ಜೊತೆ ಸಹನಿರ್ದೇಶಕನಾಗಿ ಕೆಲಸ ಮಾಡಿದ್ದ ಅಭಿ ಈಗ ನಿರ್ದೇಶಕರಾಗುತ್ತಿದ್ದಾರೆ.
ಕಡ್ಡಿಪುಡಿ, ಕೆಂಡಸಂಪಿಗೆ, ದೊಡ್ಮನೆ ಹುಡುಗ ಚಿತ್ರಗಳಿಗೆ ಸಹಾಯಕ ನಿರ್ದೇಶಕರಾಗಿದ್ದ ಅಭಿ, ನಂತರ ಸಲಗ ಹಾಗೂ ಟಗರುಗಳಲ್ಲಿ ಸಹ ನಿರ್ದೇಶಕರಾಗಿದ್ದರು. ಪ್ರೀತಿಯ ಶಿಷ್ಯನಿಗೆ ಸ್ವತಃ ಸೂರಿಯೇ ಟೈಟಲ್ ಡಿಸೈನ್ ಮಾಡಿಕೊಟ್ಟಿದ್ದಾರೆ.
ಹೊಸ ಚಿತ್ರಕ್ಕೆ ಮಾಸ್ತಿ ಸಂಭಾಷಣೆ ಬರೆಯುತ್ತಿದ್ದಾರೆ. ಚರಣ್ ರಾಜ್ ಮ್ಯೂಸಿಕ್ ಇದೆ. ಕ್ರಿಸ್ಟೋಫರ್ ಕಿಣಿ ನಿರ್ಮಾಪಕರಾಗಿದ್ದಾರೆ.