ಅಚ್ಯುತ್ ಕುಮಾರ್. ಪೋಷಕ ಪಾತ್ರಗಳಿಗೆ ಸ್ಟಾರ್ ವ್ಯಾಲ್ಯೂ ತಂದುಕೊಟ್ಟ ನಟರಲ್ಲಿ ಒಬ್ಬರು. ಅವರೀಗ ಹೀರೋ ಆಗಿದ್ದಾರೆ. ಚಿತ್ರದ ಹೆಸರು ಫೋರ್ ವಾಲ್ಸ್. ತಂದೆ ಮಗನ ಬಾಂಧವ್ಯದ ಕಥೆಯಿರೋ ಫೋರ್ ವಾಲ್ಸ್ ರಿಲೀಸ್ ಆಗೋಕೆ ರೆಡಿಯಾಗಿದೆ.
ರಾಮಾ ರಾಮಾ ರೇಯಂತಹ ಸೆನ್ಸೇಷನ್ ಸಿನಿಮಾ ಕೊಟ್ಟ ಸತ್ಯಪ್ರಕಾಶ್ ಈ ಚಿತ್ರವನ್ನು ವಿತರಣೆ ಮಾಡೋ ಮೂಲಕ ಡಿಸ್ಟ್ರಿಬ್ಯೂಷನ್ ಆರಂಭಿಸಿದ್ದಾರೆ.
ಅಚ್ಯುತ್ ಹೀರೋ ಆಗಿದ್ದು ಶಂಕರಣ್ಣನ ಪಾತ್ರದಲ್ಲಿ ನಟಿಸಿದ್ದಾರೆ. ದತ್ತಣ್ಣ ಅಚ್ಯುತ್ ಅವರ ತಂದೆ. ಮೂವರು ಹೆಣ್ಣು ಮಕ್ಕಳು ಮತ್ತು ಒಬ್ಬ ಮಗನ ನಡುವಿನ ನಾಲ್ಕು ಗೋಡೆಗಳ ನಡುವಿನ ಜೀವನ, ಅಪ್ಪನನ್ನು ಧಿಕ್ಕರಿಸುವ ಲವ್ ಸ್ಟೋರಿ.. ಎಲ್ಲವೂ ಚಿತ್ರದಲ್ಲಿದೆ. ಅನಂತ್ ನಾಗ್ ಅವರಂತೆಯೇ ನಟಿಸಿದ್ದಾರೆ ಎನ್ನುವ ಸರ್ಟಿಫಿಕೇಟ್ ಡೈರೆಕ್ಟರ್ ಎಸ್.ಎಸ್.ಸಜ್ಜನ್ ಅವರಿಂದ ಸಿಕ್ಕಿದೆ. ಟಿ.ವಿಶ್ವನಾಥ್ ನಾಯಕ್ ನಿರ್ಮಾಣದ ಸಿನಿಮಾ ಫೆಬ್ರವರಿಯಲ್ಲಿ ರಿಲೀಸ್ ಆಗುವ ನಿರೀಕ್ಷೆ ಇದೆ.