ಪ್ರಜ್ವಲ್ ದೇವರಾಜ್ ಮೇ 6ಕ್ಕೆ ಹೊಸ ಸಿನಿಮಾದೊಂದಿಗೆ ಪ್ರೇಕ್ಷಕರ ಎದುರು ಬರುತ್ತಿದ್ದಾರೆ. ಪ್ರಜ್ವಲ್ ವಿಷ್ಣು ಅಭಿಮಾನಿಯಾಗಿ ನಟಿಸಿರೋ ಚಿತ್ರ ವೀರಂ. ಪ್ರಜ್ವಲ್ ಜೊತೆ ರಚಿತಾ ರಾಮ್ ನಾಯಕಿಯಾಗಿರೋ ವೀರಂ ಸಿನಿಮಾ ರಿಲೀಸ್ ಡೇಟ್ನ್ನು ಚಿತ್ರತಂಡ 4 ತಿಂಗಳು ಮೊದಲೇ ಘೋಷಿಸಿದೆ. ಮೇ 6ರ ಹೊತ್ತಿಗೆ ಕೊವಿಡ್ ಕಷ್ಟಗಳೆಲ್ಲ ಮುಗಿದು, ದೊಡ್ಡ ದೊಡ್ಡ ಚಿತ್ರಗಳೆಲ್ಲ ಬಂದು ಹೋಗಿ ಆಗಿರುತ್ತೆ ಅನ್ನೋದು ಇನ್ನೂ ಒಂದು ಕಾರಣ.
ಕುಮಾರ್ ರಾಜ್ ನಿರ್ದೇಶನದ ಚಿತ್ರಕ್ಕೆ ಶಶಿಧರ್ ಕೆ.ಎಂ. ನಿರ್ಮಾಪಕರಾಗಿದ್ದಾರೆ. ಶ್ರೀನಗರ ಕಿಟ್ಟಿ, ಶೃತಿ, ಅಚ್ಯುತ್ ಕುಮಾರ್ ಮೊದಲಾದವರು ನಟಿಸಿರೋ ಸಿನಿಮಾ ವೀರಂ. ಸದ್ಯಕ್ಕೆ ಚಿತ್ರ ಪೋಸ್ಟ್ ಪ್ರೊಡಕ್ಷನ್ ಹಂತದಲ್ಲಿದೆ.