ಗಣರಾಜ್ಯೋತ್ಸವ ದಿನದಂದು ಜೇಮ್ಸ್ ಚಿತ್ರದ ಮೋಷನ್ ಪೋಸ್ಟರ್ ರಿಲೀಸ್ ಆಗಿದೆ. ಅಪ್ಪು ಅವರನ್ನು ಆರ್ಮಿ ಆಫೀಸರ್ ಪಾತ್ರದಲ್ಲಿ ನೋಡಿದ ಅಭಿಮಾನಿಗಳು ಭಾವುಕರಾಗಿದ್ದಾರೆ. ಅಪ್ಪು ಹೀರೋ ಆಗಿ ಅಭಿನಯಿಸಿರುವ ಕಟ್ಟಕಡೆಯ ಸಿನಿಮಾ ಜೇಮ್ಸ್. ಲಕ್ಕಿಮ್ಯಾನ್ ಚಿತ್ರದಲ್ಲಿ ಅಪ್ಪು ಗೆಸ್ಟ್ ಆ್ಯಕ್ಟರ್. ಗಂಧದ ಗುಡಿ ಸಿನಿಮಾ ಅಲ್ಲ. ಹೀಗಾಗಿ ಜೇಮ್ಸ್‍ಗೆ ಕಾಯುತ್ತಿರೋ ಫ್ಯಾನ್ಸ್ ಅಪ್ಪು ಹುಟ್ಟುಹಬ್ಬವನ್ನು ಎದುರು ನೋಡುತ್ತಿದ್ದಾರೆ.
ಮಾರ್ಚ್ 17, ಅಪ್ಪು ಹುಟ್ಟುಹಬ್ಬ. ಆ ದಿನವೇ ಸಿನಿಮಾ ರಿಲೀಸ್ ಮಾಡೋಕೆ ಮಾನಸಿಕವಾಗಿ ಸಿದ್ಧರಾಗಿದ್ದೇವೆ. ಕನ್ನಡ ಅಷ್ಟೇ ಅಲ್ಲ, ತೆಲುಗು, ತಮಿಳು, ಮಲಯಾಳಂ ಹಾಗೂ ಹಿಂದಿಯಲ್ಲೂ ಅದೇ ದಿನ ಸಿನಿಮಾ ರಿಲೀಸ್ ಮಾಡೋ ಪ್ಲಾನ್ ಇದೆ ಎಂದು ಮಾಹಿತಿ ನೀಡಿರುವುದು ನಿರ್ಮಾಪಕ ಕಿಶೋರ್ ಮತ್ತು ನಿರ್ದೇಶಕ ಚೇತನ್ ಕುಮಾರ್.
ಜೇಮ್ಸ್ ಚಿತ್ರದಲ್ಲಿ ಅಪ್ಪು ಜೊತೆ ರಾಘಣ್ಣ ಮತ್ತು ಶಿವಣ್ಣ ನಟಿಸುವುದು ಮೊದಲೇ ಪ್ಲಾನ್ ಆಗಿತ್ತು. ಅಪ್ಪುನೇ ಆಸೆಪಟ್ಟಿದ್ದರು. ಆದರೆ ಅದು ಈ ರೀತಿ ಆಗುತ್ತೆ ಎಂದುಕೊಂಡಿರಲಿಲ್ಲ. ಅವರ ಜೊತೆ ಎರಡೂವರೆ ವರ್ಷ ಜರ್ನಿ ಮಾಡಿದ್ದೇನೆ. ಅವರ ಸಿನಿಮಾ ಡೈರೆಕ್ಟ್ ಮಾಡಿದ್ದೇನೆ. ಅದೇ ನನ್ನ ಭಾಗ್ಯ ಎಂದಿದ್ದಾರೆ ಚೇತನ್.