ಒಂಬತ್ತನೇ ದಿಕ್ಕು. ದಯಾಳ್ ಪದ್ಮನಾಭ್ ನಿರ್ದೇಶನದ 19ನೇ ಸಿನಿಮಾ. ಒನ್ಸ್ ಎಗೇನ್ ವಿಭಿನ್ನ ಕಥೆಯೊಂದಿಗೆ ಬಂದಿದ್ದಾರೆ ದಯಾಳ್. ಈ ಚಿತ್ರದಲ್ಲಿ ಹೀರೋ ಲೂಸ್ ಮಾದ ಯೋಗಿ. ಹೀರೋಯಿನ್ ಅದಿತಿ ಪ್ರಭುದೇವ. ಜೊತೆಗೆ ಸಾಯಿಕುಮಾರ್, ರಮೇಶ್ ಭಟ್, ಅಶೋಕ್, ಪ್ರಶಾಂತ್ ಸಿದ್ದಿ ಸೇರಿದಂತೆ ದೊಡ್ಡ ತಾರಾಗಣವೇ ಇದೆ.
ಚಿತ್ರದ ಟ್ರೇಲರ್ ನೋಡಿದರೆ ವಿಗ್ರಹವೊಂದರ ಕಳ್ಳತನದಿಂದ ಶುರುವಾಗೋ ಕಥೆ ಅನ್ನೋದು ಗೊತ್ತಾಗಿ ಬಿಡುತ್ತೆ. ಇದರ ನಡುವೆ ಯೋಗಿ, ಅದಿತಿಯ ಕ್ಯೂಟ್ ಕ್ಯೂಟ್ ಲವ್ ಸ್ಟೋರಿಯೂ ಇದೆ. ಒಂದು ಕಡೆ ಪ್ರೀತಿ.. ಫ್ರೆಂಡ್ಶಿಪ್ಪು ಮತ್ತು ಆ ದುಡ್ಡಿನ ಬ್ಯಾಗಿನ ಹುಡುಕಾಟ.. ಹೊಡೆದಾಟದ ಥ್ರಿಲ್ಲರ್ ಕಥೆಯೇ ಒಂಬತ್ತನೇ ದಿಕ್ಕು.
ನಾಳೆ ರಿಲೀಸ್ ಆಗುತ್ತಿರೋ ಒಂಬತ್ತನೇ ದಿಕ್ಕು 3ನೇ ಲಾಕ್ ಡೌನ್ ಮಗುದಿ ಮೇಲೆ 50:50 ರೂಲ್ಸ್ನಲ್ಲಿ ರಿಲೀಸ್ ಆಗುತ್ತಿರೋ ಮೊದಲ ಸಿನಿಮಾ.