ಚಿತ್ರದಲ್ಲಿರೋದು ಒಬ್ಬ ವ್ಯಕ್ತಿ ಮತ್ತು ಒಂದು ನಾಯಿಯ ಜರ್ನಿ. ಕ್ರೈಂ ಇಲ್ಲ. ರಕ್ತಪಾತವಿಲ್ಲ. ಸೆಕ್ಸ್ ಇಲ್ಲ. ಹೀಗಿರೋವಾಗ ಯು/ಎ ಯಾಕೆ? ಯು ಸರ್ಟಿಫಿಕೇಟ್ ಕೊಡಬಹುದಿತ್ತಲ್ಲಾ? ಇಂಥಾದ್ದೊಂದು ಪ್ರಶ್ನೆ ಉದ್ಭವವಾಗೋದು ಸಹಜ. ಚಿತ್ರದ ನಿರ್ದೇಶಕ ಕಿರಣ್ ರಾಜ್ ಅವರನ್ನು ಕೇಳಿದರೆ ಅವರು ಕೊಟ್ಟ ಉತ್ತರ ಇದು.
ಸೆನ್ಸಾರ್ ಸರ್ಟಿಫಿಕೇಟ್‍ನಲ್ಲಿ ಯು ಪ್ರಮಾಣ ಪತ್ರವನ್ನೇ ತೆಗೆದುಕೊಳ್ಳಬೇಕು ಎಂಬ ಪ್ರಯತ್ನವನ್ನೇನೋ ಪಟ್ಟೆವು. ರಕ್ತ, ಹಿಂಸೆ ಬರದಂತೆ ನೋಡಿಕೊಂಡೆವು. ಆದರೆ ಚಿತ್ರದ ನಾಯಕ ಧರ್ಮನ ಲೈಫ್ ತೋರಿಸೋಕೆ ಸಿಗರೇಟು, ಬಿಯರು, ಗಲಾಟೆ ಅನಿವಾರ್ಯ. ಅದರ ಮೂಲಕವೇ ಧರ್ಮನ ಕ್ಯಾರೆಕ್ಟರ್ ಎಸ್ಟಾಬ್ಲಿಷ್ ಆಗುತ್ತೆ. ಸದ್ಯ ಸಿಗರೇಟು, ಡ್ರಿಂಕ್ಸ್ ಬಗ್ಗೆ ಸ್ಟ್ರಿಕ್ಟ್ ರೂಲ್ಸ್ ಇರೋ ಕಾರಣ ಯು ಪ್ರಮಾಣ ಪತ್ರ ಆಗಲ್ಲ ಎಂದರು. ಹೀಗಾಗಿ ಯು/ಎಗೆ ಒಪ್ಪಿಕೊಂಡೆವು ಎನ್ನುತ್ತಾರೆ ನಿರ್ದೇಶಕ ಕಿರಣ್ ರಾಜ್.
ಸಿನಿಮಾ ರಿಲೀಸ್ ಯಾವಾಗ ಅನ್ನೋದು ಫೆಬ್ರವರಿಯಲ್ಲಿ ಗೊತ್ತಾಗಲಿದೆಯಂತೆ.