ಜಾನಕಿ. ಎನ್ಟಿಆರ್ ಜೊತೆ ನಟಿಸಿದ ಸಾಹುಕಾರ್ ಚಿತ್ರದಿಂದ ಬೆಳ್ಳಿತೆರೆಗೆ ಬಂದ ನಟಿ. ಸಾಹುಕಾರ್ ಜಾನಕಿ ಎಂದೇ ಗುರುತಿಸಿಕೊಂಡ ನಟಿ. ವಯಸ್ಸು 90 ದಾಟಿದೆ. ಕನ್ನಡದಲ್ಲಿ ರತ್ನಗಿರಿ ರಹಸ್ಯ, ಮಹಿಷಾಸುರ ಮರ್ದಿನಿ, ದೈವಲೀಲೆ, ದೇವಸುಂದರಿ, ಸತಿ ಶಕ್ತಿ, ಮಲ್ಲಿ ಮದುವೆ, ಗೌರಿ, ಸಾಕ ಮಗಳು, ಕನ್ಯಾರತ್ನ ಸೇರಿದಂತೆ ಹಲವು ಚಿತ್ರಗಳಲ್ಲಿ ನಟಿಸಿರುವ ನಟಿ. ಕನ್ನಡ, ತೆಲುಗು, ತಮಿಳು, ಹಿಂದಿ, ಬೆಂಗಾಳಿ.. ಹೀಗೆ ಹಲವು ಭಾಷೆಗಳಲ್ಲಿ ನಟಿಸಿರುವ ಚಿತ್ರಗಳ ಸಂಖ್ಯೆ 400ಕ್ಕೂ ಹೆಚ್ಚು.
ಸೋನುನಿಗಂ. ಕನ್ನಡ ಸೇರಿದಂತೆ ದೇಶದ ಹಲವು ಭಾಷೆಗಳಲ್ಲಿ ಸಾವಿರಾರು ಹಾಡು ಹಾಡಿರುವ ಗಾಯಕ.
ಇವರಿಬ್ಬರಿಗೂ ಈ ಬಾರಿ ಪದ್ಮಶ್ರೀ ಪುರಸ್ಕಾರ ನೀಡಿ ಕೇಂದ್ರ ಸರ್ಕಾರ ಗೌರವಿಸಿದೆ.