ನಿರ್ದೇಶಕ ವಿಜಯ್ ಪ್ರಸಾದ್ ಏನೇ ಮಾಡಿದರೂ ಒಂದಿಷ್ಟು ತರಲೆ ಫಿಕ್ಸು. ಅವರ ಜೊತೆಗೆ ಜಗ್ಗೇಶ್ ಕೂಡಾ ಸೇರಿಕೊಂಡ್ರೆ ತರಲೆಯೂ ಡಬಲ್. ಕೀಟಲೆಯೂ ಡಬಲ್. ತುಂಟಾಟವೂ ಡಬಲ್. ತೋತಾಪುರಿ ಚಿತ್ರದ ಹಾಡು ಬಿಡೋಕೆ ಮೊದಲು ವಿಜಯ್ ಪ್ರಸಾದ್ ಪುಟ್ಟದೊಂದು ತೊಟ್ಟು ಬೊಟ್ಟಿನ ಟೀಸರ್ ಬಿಟ್ಟಿದ್ದಾರೆ.
ತೊಟ್ಟು ಬೊಟ್ಟಿನ ಮೊದಲ ನೋಟ.. ಮೊದಲ ಮಾತು ಎಂದು ಹೇಳಿ ಬಿಟ್ಟಿರೋ ಟೀಸರ್‍ನಲ್ಲಿ ಹೇಳಿರೋದು ಮಾತ್ರ ಹಾಡಿನ ಬಗ್ಗೆ. ಜಗ್ಗೇಶ್ ಮತ್ತು ಅದಿತಿ ಪ್ರಭುದೇವ ನಡುವೆ ಅದೇನೋ ಕೆಮಿಸ್ಟ್ರಿ ನಡೆಯುತ್ತೆ. ಅದಿಷ್ಟನ್ನು ತೋರಿಸಿ ಹಾಡು ಬಿಡ್ತೀವಿ ಎಂದು ಹೇಳಿದ್ದಾರೆ ವಿಜಯ್ ಪ್ರಸಾದ್. ಎರಡು ಭಾಗಗಗಳಲ್ಲಿ ರಿಲೀಸ್ ಆಗಲಿರೋ ತೋತಾಪುರಿ ಚಿತ್ರದ ರಿಲೀಸ್ ಡೇಟ್‍ನ್ನು ನಿರ್ಮಾಪಕ ಕೆ.ಎ.ಸುರೇಶ್ ಇನ್ನೂ ಫಿಕ್ಸ್ ಮಾಡಿಲ್ಲ.