ವಜ್ರಕಾಯ ಚಿತ್ರದಲ್ಲಿ ಗೀತಾ ಪಾತ್ರದಲ್ಲಿ ನಟಿಸಿದ್ದ ಶುಭ್ರಾ ಅಯ್ಯಪ್ಪ ಕೊನೆಗೂ ಎಂಗೇಜ್ ಆಗಿದ್ದಾರೆ. ಶುಭ್ರಾ ಮನಸ್ಸು ಮತ್ತು ಹೃದಯ ಕದ್ದ ಹುಡುಗನ ಹೆಸರು ವಿಶಾಲ್ ಶಿವಪ್ಪ. ಬೆಂಗಳೂರಿನಲ್ಲಿ ಉದ್ಯಮಿ.
ವಿಶಾಲ್ ನನಗೆ ಹಲವು ವರ್ಷಗಳ ಪರಿಚಯ ಮತ್ತು ಗೆಳೆಯ. ಇತ್ತೀಚೆಗೆ ಮಾಲ್ಡೀವ್ಸ್ಗೆ ಹೋಗಿದ್ದಾಗ ಬೀಚ್ನಲ್ಲಿ ಕ್ಯಾಂಡಲ್ಸ್ ಇಟ್ಟು ನನ್ನ ಮುಂದೆ ಮಂಡಿಯೂರಿ ಐ ಲವ್ ಯೂ ಎಂದು ಹೇಳಿದಾಗ ಎಸ್ ಎಂದುಬಿಟ್ಟೆ ಎಂದಿದ್ದಾರೆ ಶುಭ್ರಾ ಅಯ್ಯಪ್ಪ. ಕೊರೊನಾ ಎಲ್ಲ ಮುಗಿದ ಮೇಲೆ ನಿಶ್ಚಿತಾರ್ಥ, ಮದುವೆ ಪ್ಲಾನ್ ಮಾಡೋದಾಗಿ ಹೇಳಿದ್ದಾರೆ.