ಶಿವಣ್ಣ ಈ ಬಾರಿ ಪ್ಯಾನ್ ಇಂಡಿಯಾ ಸಿನಿಮಾಗೆ ಕೈ ಹಾಕಿದ್ದಾರೆ. ಶಿವಣ್ಣ ಚಿತ್ರಗಳು ದೇಶಾದ್ಯಂತ ಸದ್ದು ಮಾಡಿರುವುದು ಮೊದಲೇನೂ ಅಲ್ಲ. ಓಂ, ಜೋಗಿ ಚಿತ್ರಗಳು ದೇಶದೆಲ್ಲೆಡೆ ಸೌಂಡು ಮಾಡಿದ್ದವು. ಆದರೆ ಈ ಬಾರಿ ಸ್ವತಃ ಶಿವಣ್ಣ ಪ್ಯಾನ್ ಇಂಡಿಯಾ ಚಿತ್ರಕ್ಕೆ ಓಕೆ ಎಂದಿದ್ದಾರೆ. ನಿರ್ದೇಶಕ ಆರ್ ಜೈ.
ಬುದ್ದಿವಂತ ಚಿತ್ರವನ್ನು ನಿರ್ದೇಶಿಸಿದ್ದ ಜಯರಾಂ ಭದ್ರಾವತಿ ಅವರೇ ಈ ಆರ್ ಜೈ. ಈ ಬಾರಿ ಶಿವಣ್ಣಗಾಗಿ ಸಿನಿಮಾ ಮಾಡುತ್ತಿದ್ದಾರೆ. ಪ್ಯಾನ್ ಇಂಡಿಯಾ ಸಿನಿಮಾ ಎಂದು ಘೋಷಿಸಿಯೂ ಬಿಟ್ಟಿದ್ದಾರೆ. ಚಿತ್ರದಲ್ಲಿ ಶಿವಮೊಗ್ಗದಲ್ಲಿ ಸಂಚಲನ ಮೂಡಿಸಿದ್ದ ಭೂಗತ ಲೋಕದ ಕಥೆ ಇದೆಯಂತೆ. ಕನ್ನಡ, ತೆಲುಗು, ತಮಿಳು, ಹಿಂದಿ ಹಾಗೂ ಲಯಾಳಂ. ಒಟ್ಟು ಐದು ಭಾಷೆಗಳಲ್ಲಿ ಸಿನಿಮಾ ರೆಡಿಯಾಗಲಿದೆ.
ಮಗಳು ವಿಂದ್ಯಾ ಹುಟ್ಟುಹಬ್ಬಕ್ಕೆ ಗಿಫ್ಟ್ ಕೊಡಲೆಂದು, ಚಂದನ್ ಶೆಟ್ಟಿಯ ಹೊಸ ವರ್ಷದ ರ್ಯಾಪ್ ಸಾಂಗ್ ಲಕಲಕ ಲ್ಯಾಂಬೊರ್ಗಿನಿಗೆ ಬಂಡವಾಳ ಹೂಡಿದ್ದ ಆರ್.ಕೇಶವ್ ಈ ಚಿತ್ರಕ್ಕೆ ಪ್ರೊಡ್ಯೂಸರ್. ಸಿನಿಮಾ ಫೆಬ್ರವರಿಯಲ್ಲಿ ಸೆಟ್ಟೇರಲಿದೆ.