ರಕ್ಷಿತ್ ಶೆಟ್ಟಿ ಅಭಿನಯದ ಚಾರ್ಲಿ 777, ಡಿಸೆಂಬರ್ ಕೊನೆಯ ವಾರ ರಿಲೀಸ್ ಆಗಬೇಕಿತ್ತು. ತಾಂತ್ರಿಕ ಕಾರಣ ಹೇಳಿ ಕೊರೊನಾ ಸಂಕಷ್ಟದಿಂದ ಮೊದಲೇ ಬಚಾವ್ ಆದ ಚಾರ್ಲಿ 777 ಈಗ ಸೆನ್ಸಾರ್ ಮುಗಿಸಿದೆ. ಯು/ಎ ಸರ್ಟಿಫಿಕೇಟ್ ಪಡೆದುಕೊಂಡಿದೆ.
ರಕ್ಷಿತ್ ಶೆಟ್ಟಿ, ಸಂಗೀತಾ ಶೃಂಗೇರಿ, ರಾಜ್ ಬಿ.ಶೆಟ್ಟಿ, ಡ್ಯಾನಿಶ್ ಸೇಟ್ ನಟಿಸಿರುವ ಚಿತ್ರಕ್ಕೆ ರಕ್ಷಿತ್ ಶೆಟ್ಟಿ ಮತ್ತು ಜಿ.ಎಸ್.ಗುಪ್ತಾ ನಿರ್ಮಾಪಕರು. ಪರಂವಾ ಸ್ಟುಡಿಯೋಸ್ನ 777 ಚಾರ್ಲಿಗೆ ಕಿರಣ್ ರಾಜ್ ನಿರ್ದೇಶಕ. ಹೀರೋ ಮತ್ತು ಚಾರ್ಲಿ ಎನ್ನುವ ನಾಯಿಯ ಜರ್ನಿಯ ಕಥೆ ಚಿತ್ರದಲ್ಲಿದೆ. ಶೀಘ್ರದಲ್ಲೇ ರಿಲೀಸ್ ಡೇಟ್ ಅನೌನ್ಸಾಗಲಿದೆ.