ರಾಜ್ ಬಿ.ಶೆಟ್ಟಿ ರೂಪಾಂತರಗೊಂಡಿದ್ದಾರೆ. ಅದು ಪರಭಾಷೆಗಳಲ್ಲಿ. ರಾಜ್ ಬಿ.ಶೆಟ್ಟಿಯವರ ಗರುಡ ಗಮನ ವೃಷಭ ವಾಹನ ಹಿಟ್ ಆದ ಬೆನ್ನಲ್ಲೇ ವೆರೈಟಿ ವೆರೈಟಿ ಪಾತ್ರಗಳು ಹುಡುಕಿಕೊಂಡು ಬರುತ್ತಿವೆ. ಇದರ ಜೊತೆಗೆ ಮಾರುಕಟ್ಟೆಯೂ ದೊಡ್ಡದಾಗುತ್ತಿದೆ. ಗರುಡ ಗಮನ ಚಿತ್ರವನ್ನು ತಮಿಳಿನಲ್ಲಿ ರೀಮೇಕ್ ಮಾಡಲು ಮಾತುಕತೆ ಶುರುವಾಗಿದೆ. ರೀಮೇಕ್ ಹಕ್ಕು ಕೇಳಿರುವುದು ತಮಿಳಿನ ಸ್ಟಾರ್ ಡೈರೆಕ್ಟರ್ ಗೌತಮ್ ವಾಸುದೇವ್ ಮೆನನ್. ಉಳಿದ ಭಾಷೆಗಳಲ್ಲಿಯೂ ಮಾತುಕತೆ ಪ್ರಗತಿಯಲ್ಲಿದೆ.
ಇದರ ನಡುವೆ ಮಂಗಳೂರು ಡಾನ್ ಶೆಟ್ಟಿ, ಬೆಂಗಳೂರು ಡಾನ್ ಆಗಿದ್ದಾರೆ. ರೂಪಾಂತರ ಅನ್ನೋ ಚಿತ್ರದಲ್ಲಿ ರಾಜ್ ಬಿ.ಶೆಟ್ಟಿ ನಟಿಸಿದ್ದು, ಚಿತ್ರೀಕರಣವೂ ಮುಗಿದಿದೆಯಂತೆ. ಮಿಥಿಲೇಶ್ ಕುಮಾರ್ ಎಡವಲದ್ ಎಂಬುವವರು ನಿರ್ದೇಶಿಸಿರುವ ಚಿತ್ರದಲ್ಲಿ
ಒಬ್ಬ ಮನುಷ್ಯ ಬೇರೆ ಬೇರೆ ಸಂದರ್ಭಗಳಲ್ಲಿ ಹೇಗೆಲ್ಲ ಬದಲಾಗುತ್ತಾನೆ ಎನ್ನುವ ಕಥೆ ಹೇಳಿದ್ದಾರಂತೆ. ಒಂದು ಮೊಟ್ಟೆಯ ಕಥೆ ನಿರ್ಮಾಪಕ ಸುಹಾಸ್ ಅವರೇ ಈ ಚಿತ್ರಕ್ಕೂ ಪ್ರೊಡ್ಯೂಸರ್.