ವೀಕೆಂಡ್ ಕಫ್ರ್ಯೂ, 50:50 ರೂಲ್ಸ್ ಇಲ್ಲದೇ ಹೋಗಿದ್ದರೆ ಇಷ್ಟೊತ್ತಿಗೆ ದೇಶಾದ್ಯಂತ ಆರ್.ಆರ್.ಆರ್. ಹವಾ ಎದ್ದಿರಬೇಕಿತ್ತು. ಅನಿವಾರ್ಯವಾಗಿ ರಿಲೀಸ್ ಡೇಟ್ ಮುಂದೂಡಿದ ಸಂಸ್ಥೆ ಈಗಲೂ ಗೊಂದಲದಲ್ಲಿಯೇ ಇದೆ. ಆರ್.ಆರ್.ಆರ್. ಮುಂದೀಗ ಕೆಲವು ಡೇಟ್ಸ್ ಇವೆ.
ಮಾರ್ಚ್ 18ಕ್ಕೆ ರಿಲೀಸ್ ಮಾಡೋದು ಮೊದಲ ಪ್ಲಾನ್. ಆಗ ಏಪ್ರಿಲ್ 1ರಂದು ರಿಲೀಸ್ ಆಗಲಿರುವ ದೊಡ್ಡ ಚಿತ್ರಗಳಿಗೆ ಗ್ಯಾಪ್ ಸಿಕ್ಕಂತಾಗುತ್ತೆ. ಏಪ್ರಿಲ್ 1ಕ್ಕೆ ತೆಲುಗಿನಲ್ಲೆ ಮಹೇಶ್ ಬಾಬು ಮತ್ತು ಚಿರಂಜೀವಿ ಸಿನಿಮಾಗಳಿವೆ.
ಏಪ್ರಿಲ್ 14ಕ್ಕೆ ಕೆಜಿಎಫ್ ಚಾಪ್ಟರ್ 2 ಮತ್ತು ಲಾಲ್ ಸಿಂಗ್ ಚಡ್ಡಾ ಇದೆ. ಮಾರ್ಚ್ 18ನ್ನು ಬಿಟ್ಟರೆ ಆರ್.ಆರ್.ಆರ್. ಚಿತ್ರಕ್ಕೆ ಡೇಟ್ ಸಿಕ್ಕೋದು ಏಪ್ರಿಲ್ 28ಕ್ಕೆ. ಒಟ್ಟಿನಲ್ಲಿ ಮಾರ್ಚ್ ಮಧ್ಯಾಂತರದ ನಂತರ ದೇಶಾದ್ಯಂತ ಚಿತ್ರ ಪ್ರೇಮಿಗಳಿಗೆ ಸುಗ್ಗಿಯೋ ಸುಗ್ಗಿ.