ವರ್ಷದ ಕೊನೆಯಲ್ಲಿ ರಿಲೀಸ್ ಆಗಿ ಭರ್ಜರಿಯಾಗಿ ಹಿಟ್ ಆದ ಸಿನಿಮಾ ಬಡವ ರಾಸ್ಕಲ್. ಥಿಯೇಟರುಗಳಲ್ಲಿ ಅಬ್ಬರ ಮುಗಿಯುವ ಹೊತ್ತಿಗೆ ಒಟಿಟಿಗೆ ಬರುತ್ತಿದೆ. ಇದೇ ಗಣರಾಜ್ಯೋತ್ಸವಕ್ಕೆ ಬಡವ ರಾಸ್ಕಲ್ ಒಟಿಟಿಯಲ್ಲಿ ರಿಲೀಸ್ ಆಗುತ್ತಿದೆ. ವೂಟ್ ಸೆಲೆಕ್ಟ್‍ನಲ್ಲಿ..
ಶಂಕರ್ ಗುರು ನಿರ್ದೇಶನದ ಬಡವ ರಾಸ್ಕಲ್, ಧನಂಜಯ್ ಅವರ ನಿರ್ಮಾಣದ ಮೊದಲ ಸಿನಿಮಾ ಆಗಿತ್ತು. ಧನಂಜಯ್ ಎದುರು ಅಮೃತಾ ಅಯ್ಯಂಗಾರ್ ನಾಯಕಿಯಾಗಿ ನಟಿಸಿ ಗೆದ್ದಿದ್ದರು. ಪ್ರೇಕ್ಷಕರಂತೂ ಬಡವ ರಾಸ್ಕಲ್‍ನನ್ನು ಅಪ್ಪಿ ಮುದ್ದಿಸಿದ್ದರು. ಈಗ ಮನೆ ಮನೆಗೆ... ಮೊಬೈಲ್ ಮೊಬೈಲ್‍ಗೆ ಬರುತ್ತಿದೆ.. ಜನವರಿ 26ಕ್ಕೆ.