ಟೈಗರ್ ಪ್ರಭಾಕರ್ ಚಿತ್ರರಂಗಕ್ಕೆ ಬಂದಿದ್ದು ಸ್ಟಂಟ್ ಹುಡುಗನಾಗಿ. ನಂತರ ಪುಟ್ಟ ಪುಟ್ಟ ಪಾತ್ರಗಳಲ್ಲಿ ಕಾಣಿಸಿಕೊಳ್ಳುತ್ತಲೇ ಖಳನಟರಾದರು. ಹೀರೋ ಆದರು. ನಿರ್ಮಾಪಕರಾದರು. ನಿರ್ದೇಶಕರಾದರು. ಚಿತ್ರರಂಗದ ಎಲ್ಲ ವಿಭಾಗಗಳಲ್ಲೂ ಕೆಲಸ ಮಾಡಿ ಗೆದ್ದರು. ಈಗ ಅದೇ ಹಾದಿಯಲ್ಲಿದ್ದಾರೆ ಮರಿ ಟೈಗರ್ ವಿನೋದ್ ಪ್ರಭಾಕರ್.
ಲಂಕಾಸುರ ಅನ್ನೋ ಚಿತ್ರ ಘೋಷಣೆಯಾಗಿದೆ. ಆ ಚಿತ್ರಕ್ಕೆ ನಿಶಾ ವಿನೋದ್ ನಿರ್ಮಾಪಕಿ. ಟೈಗರ್ ಟಾಕೀಸ್ ಬ್ಯಾನರ್ನಲ್ಲಿ ಲಂಕಾಸುರ ಸೆಟ್ಟೇರಿದೆ. ವಿನೋದ್ ಹೊಸ ಸಾಹಸಕ್ಕೆ ಕೈ ಜೋಡಿಸಿರುವ ಲೂಸ್ ಮಾದ ಯೋಗಿ ಚಿತ್ರದ ಪ್ರಮುಖ ಪಾತ್ರವೊಂದರಲ್ಲಿ ನಟಿಸುತ್ತಿದ್ದಾರೆ. ದೇವರಾಜ್, ರವಿಶಂಕರ್ ಮೊದಲಾದವರು ನಟಿಸುತ್ತಿರೋ ಚಿತ್ರಕ್ಕೆ ಡಿ.ಪ್ರಮೋದ್ ಕುಮಾರ್ ನಿರ್ದೇಶಕ.