ಬಜಾರ್ ಚಿತ್ರದ ಮೂಲಕ ಭರವಸೆ ಹುಟ್ಟಿಸಿದ್ದ ನಟ ಧನ್ವೀರ್ ಈಗ ಮತ್ತೊಂದು ಚಿತ್ರಕ್ಕೆ ಓಕೆ ಎಂದಿದ್ದಾರೆ. ಚಿತ್ರದ ಟೈಟಲ್ ಅನೌನ್ಸ್ ಆಗಿದೆ. ವಾಮನ. ಸಂಕ್ರಾಂತಿ ಹಬ್ಬದ ಸ್ಪೆಷಲ್ ಆಗಿ ಚಿತ್ರದ ಪೋಸ್ಟರ್ ಬಿಟ್ಟಿದ್ದಾರೆ ವಾಮನ ಪ್ರೊಡ್ಯೂಸರ್ ಚೇತನ್ ಕುಮಾರ್ ಗೌಡ.
ವಾಮನ ಚಿತ್ರದಲ್ಲಿ ಭೂಗತ ಲೋಕದ ಕಥೆ ಇದ್ದು, ಧನ್ವೀರ್ ರಗಡ್ ಲುಕ್ನಲ್ಲಿ ಕಾಣಿಸಿದ್ದಾರೆ. ಕನ್ನಡ ಮತ್ತು ತೆಲುಗಿನಲ್ಲಿ ಸ್ಕ್ರಿಪ್ಟ್ ರೈಟರ್ ಆಗಿದ್ದ ಶಂಕರ್ ರಾಮನ್ ಈ ಚಿತ್ರದ ಮೂಲಕ ನಿರ್ದೇಶಕರಾಗುತ್ತಿದ್ದಾರೆ. ಚಿತ್ರರಂಗದಲ್ಲಿ ಶಂಕರ್ ರಾಮನ್ ಅವರಿಗೆ 13 ವರ್ಷದ ಅನುಭವವಿದೆ. ಮೊದಲ ಚಿತ್ರ ಬಜಾರ್ ನಂತರ 2ನೇ ಚಿತ್ರ ಬೈ ಟು ಲವ್ ಬಹುತೇಕ ಮುಗಿದಿದ್ದು, ರಿಲೀಸ್ ಆಗಬೇಕಿದೆ.