ಯಾವುದೇ ಅಡ್ಡಿ ಆತಂಕ ಬರದೇ ಇದ್ದರೆ 2021ರ ಜುಲೈನಲ್ಲೇ ಕೆಜಿಎಫ್ ಚಾಪ್ಟರ್ 2 ರಿಲೀಸ್ ಆಗಬೇಕಿತ್ತು. ಕೊರೊನಾ ಕಾರಣದಿಂದ ಚಿತ್ರೀಕರಣವೂ ಲೇಟ್ ಆಗಿ ಚಿತ್ರ ಮುಗಿದಾಗ 2021 ಮುಗಿಯುವ ಹಂತದಲ್ಲಿತ್ತು. ಕೊರೊನಾ ಕೂಡಾ ತಣ್ಣಗಾಗಿತ್ತು. ಆದರೆ ಕೆಜಿಎಫ್ ಚಾಪ್ಟರ್ 2 ರಿಲೀಸ್ ಡೇಟ್ ಅನೌನ್ಸ್ ಮಾಡಿದಾಗ ಎಲ್ಲರೂ ಹುಬ್ಬೇರಿಸಿದ್ದರು. ಹೆಚ್ಚೂ ಕಡಿಮೆ 6 ತಿಂಗಳು ಲೇಟ್ ಆಯ್ತು, ಯಾಕೆ ಸುಮ್ಮನೆ ಅಷ್ಟೊಂದು ಮುಂದಕ್ಕೆ ಹೋದರು ಎಂದುಕೊಂಡಿದ್ದರು. ಡಿಸೆಂಬರ್ ಅಥವಾ ಜನವರಿಯಲ್ಲಿ ಬರಬಹುದಿತ್ತಲ್ಲಾ ಎಂದಿದ್ದರು. ಅದಕ್ಕೆಲ್ಲ ಉತ್ತರವಾಗಿ ಈಗಿನ ಪರಿಸ್ಥಿತಿ ಇದೆ.
ಅದೊಂದು ಊಹೆ, ನಿರೀಕ್ಷೆ ಆತಂಕವನ್ನು ನಾವು ಮುಂದಾಲೋಚಿಸಿದ್ದೆವು. ಈ ಸನ್ನಿವೇಶ ನಮ್ಮ ಊಹೆಯಲ್ಲಿದ್ದ ಕಾರಣಕ್ಕೇ ಏಪ್ರಿಲ್ ಡೇಟ್ ಅನೌನ್ಸ್ ಮಾಡಿದ್ದು. ಈಗಿನ್ನೂ ಜನವರಿ, ಏಪ್ರಿಲ್ ಹೊತ್ತಿಗೆ ಎಲ್ಲವೂ ಸುಸೂತ್ರವಾಗಲಿದೆ ಎಂದಿದ್ದಾರೆ ರಾಕಿಂಗ್ ಸ್ಟಾರ್ ಯಶ್.
ನಮಗೆ ಕ್ಲಾರಿಟಿ ಇದೆ. ನಾವು ಒಳ್ಳೆಯ ಸಿನಿಮಾ ಕೊಡುತ್ತೇವೆ ಎಂಬ ಕಾರಣಕ್ಕಾಗಿಯೇ ಜನ ಕಾಯುತ್ತಿದ್ದಾರೆ. ಅದನ್ನು ಸುಳ್ಳು ಮಾಡಲ್ಲ. ಈಗಲೇ ಟೀಸರ್, ಟ್ರೇಲರ್ ರಿಲೀಸ್ ಮಾಡೋಕೆ ಹೋದರೆ ತುಂಬಾ ಬೇಗ ಆಗುತ್ತೆ. ಸಿನಿಮಾದ ಪ್ರಚಾರವನ್ನೂ ಚೆನ್ನಾಗಿ ಮಾಡ್ತೇವೆ. ಈ ಬಾರಿ ಚಿತ್ರವನ್ನು ಗ್ಲೋಬಲ್ ಲೆವೆಲ್ಲಿಗೆ ತೆಗೆದುಕೊಂಡು ಹೋಗುತ್ತೇವೆ ಎಂದಿದ್ದಾರೆ ಯಶ್.